Publish Date: Thu, 22 Nov 2018 (19:53 IST)
Updated Date: Thu, 22 Nov 2018 (19:55 IST)
ಹಣ್ಣು, ಎಳನೀರು ಹಾಗೂ ಕಾಫಿ, ಟೀ ಮಾರಾಟ ಮಾಡುವ ವ್ಯಾಪಾರಿಗಳು ಪುರಸಭೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಬೀದಿ ಬದಿ ಅಂಗಡಿಗಳನ್ನು ಅಕ್ರಮವಾಗಿ ಕಟ್ಟಿಕೊಂಡಿದ್ದವನ್ನು ತೆರವುಗೊಳಿಸಿದ ಹಿನ್ನೆಲೆಯಲ್ಲಿ ವ್ಯಾಪಾರಿಗಳಿಂದ ಪುರಸಭೆ ಮುಂಭಾಗ ಪ್ರತಿಭಟನೆ ನಡೆಯಿತು.
ಆನೇಕಲ್ ನ ಬೊಮ್ಮಸಂದ್ರ ಪುರಸಭೆ ಮುಂಭಾಗ ಪ್ರತಿಭಟನೆ ನಡೆಯಿತು. ನಾರಾಯಣ ಹೆಲ್ತ್ ಸಿಟಿ ಮುಂಭಾಗ ಇದ್ದ 30 ಕ್ಕೂ ಹೆಚ್ಚು ಸಣ್ಣ ಅಂಗಡಿಗಳನ್ನು ತೆರವುಗೊಳಿಸಲಾಗಿದೆ.
ಹಣ್ಣು, ಎಳನೀರು, ಕಾಫಿ, ಟೀ ಅಂಗಡಿಗಳು ಅಕ್ರಮವಾಗಿರುವುದನ್ನು ತೆರವುಗೊಳಿಸಲಾಯಿತು.
ಜೀವನಾಧಾರವಾಗಿದ್ದ ಅಂಗಡಿಗಳ ತೆರವಿನಂದ ವ್ಯಾಪಾರಿಗಳು ಕಂಗಾಲಾಗಿದ್ದಾರೆ. ಬೇರೆ ಪರ್ಯಾಯ ಜಾಗ ನೀಡುವಂತೆ ವ್ಯಾಪಾರಿಗಳು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದರು. ಇದರಿಂದಾಗಿ ಪುರಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.