Select Your Language

Notifications

webdunia
webdunia
webdunia
webdunia

ದೇವೇಗೌಡರ ಊರಲ್ಲಿ ಬಡವರ ಪಾಡು ಕೇಳೋರು ಯಾರು?

ದೇವೇಗೌಡರ ಊರಲ್ಲಿ ಬಡವರ ಪಾಡು ಕೇಳೋರು ಯಾರು?
ಹಾಸನ , ಗುರುವಾರ, 22 ನವೆಂಬರ್ 2018 (14:22 IST)
ರಾಜ್ಯದಲ್ಲಿ ಒಂದೆಡೆ ರೈತರ ಪ್ರತಿಭಟನೆಯ ಕಾವು ಜೋರಾಗಿದೆ. ಇದರ  ನಡುವೆ ವೃದ್ಧರ  ಮತ್ತು ವಿಶೇಷ ಚೇತನರ ಪರದಾಟ ಪ್ರಾರಂಭವಾಗಿದೆ. ಮೂರು ತಿಂಗಳ ಪಿಂಚಣಿ ಸಿಗದೆ ಬಡವರು ಇನ್ನಷ್ಟು ಹೈರಾಣಾಗುವಂತಾಗಿದೆ.

ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ಊರಾದ ಹಾಸನದಲ್ಲಿ ಬಡವರು ಪಿಂಚಣಿ ಸಿಗದೆ ಸುತ್ತಾಡುವಂತಾಗಿದೆ. ಜಿಲ್ಲೆಯಲ್ಲಿ ಒಟ್ಟು 2,67,610 ಜನ ತಿಂಗಳಿಗೆ 600 ರೂ. ಪಿಂಚಣಿ  ಪಡೆಯುವವರಿದ್ದು, ಮೂರು ತಿಂಗಳಿನಿಂದ ಯಾವುದೇ ಹಣ ಬರುತ್ತಿಲ್ಲ. ಹೀಗಾಗಿ  ಜನರು ತಹಸೀಲ್ದಾರ್​ ಕಛೇರಿಗೆ  ಭೇಟಿ ನೀಡುತ್ತಿದ್ದಾರೆ. ಆದರೆ ಅಧಿಕಾರಿಗಳು  ಕೇವಲ ಭರವಸೆ ನೀಡಿ ಕಳುಹಿಸಿದ್ದಾರೆ. ಇದರಿಂದ ಫಲಾನುಭವಿಗಳು ತಲೆ ಮೇಲೆ ಕೈ ಹೊತ್ತು ಕುತಿದ್ದಾರೆ.

ಇಲ್ಲಿನ ಬಡಜನ ಪಿಂಚಣಿಗಾಗಿ ಬಕ ಪಕ್ಷಿಯಂತೆ ಕಾದು ಕುಳಿತಿದ್ದಾರೆ. ಪಿಂಚಣಿಯನ್ನೇ ಆಧಾರವಾಗಿಸಿಕೊಂಡ ವೃದ್ಧರ ಪಾಡು ಕಷ್ಟಕರವಾಗಿದೆ. ಸರ್ಕಾರ ಪಿಂಚಣಿ ನೀಡಿ  ಬಡ ಜನತೆಗೆ ಅನುಕೂಲ ಮಾಡಿಕೊಡಬೆಕಿದೆ.




Share this Story:

Follow Webdunia kannada

ಮುಂದಿನ ಸುದ್ದಿ

ಹಂಪಿ ಉತ್ಸವದ ಮೇಲೆ ಬರದ ಕರಿನೆರಳು!