Publish Date: Thu, 08 Nov 2018 (17:19 IST)
Updated Date: Thu, 08 Nov 2018 (17:27 IST)
ಹಾಸನಾಂಬೆ ದರ್ಶನ ಕೊನೆ ದಿನ ಹಿನ್ನೆಲೆಯಲ್ಲಿ ನಾಡಿನ ವಿವಿಧ ಭಾಗಗಳಿಂದ ದೇವಿ ದರ್ಶನಕ್ಕೆ ಭಕ್ತರು ತಂಡೋಪ ತಂಡವಾಗಿ ಆಗಮಿಸಿದರು.
ಹಾಸನಾಂಬೆ ದೇವಿಗೆ ಇಲ್ಲಿಯವರೆಗೂ ಸುಮಾರು 1.86 ಲಕ್ಷ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ನ.9 ರವರೆಗೆ ಹಾಸನಾಂಬೆ ದರ್ಶನ ಲಭ್ಯವಾಗಲಿದೆ.
ಕೊನೆ ದಿನ ಭಕ್ತರಿಗೆ ದರ್ಶನ ಭಾಗ್ಯವಿದೆ. ನ.9ರಂದು ಭಕ್ತರಿಗೆ ದೇವಿಯ ದರ್ಶನಕ್ಕೆ ಅವಕಾಶವಿಲ್ಲ. ಹೀಗಾಗಿ ನ.8ರಂದೇ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಬಲಿಪಾಡ್ಯಮೆ ಹಿನ್ನೆಲೆ ಹೆಚ್ಚಿನ ಭಕ್ತರು ಆಗಮಿಸಿದ್ದರು.
ನಾಳೆ ವಿಧಿ ವಿಧಾನಗಳ ಮೂಲಕ ಹಾಸನಾಂಬೆ ದೇವಾಲಯದ ಬಾಗಿಲು ಮುಚ್ಚಲಿದೆ.