ಕೋಟಿಗಟ್ಟಲೆ ಅವ್ಯವಹಾರ: ಇಂಜಿನಿಯರ್ ಅಮಾನತ್

ಗುರುವಾರ, 8 ನವೆಂಬರ್ 2018 (16:22 IST)
ಕೋಟಿಗಟ್ಟಲೆ ಅವ್ಯವಹಾರ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರೇಡ್ 2 ಇಂಜಿನಿಯರ್ ನನ್ನು ಅಮಾನತ್ ಗೊಳಿಸಿರುವ ಘಟನೆ ನಡೆದಿದೆ.

ಸಿವಿಒ‌ ಗುರುದತ್ ಹೆಗಡೆಯವರು ಅಮಾನತ್ತು  ಆದೇಶ ಹೊರಡಿಸಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುಡಿಯವ ನೀರು ಮತ್ತು ನೈರ್ಮಲ್ಯ ಇಲಾಖೆಯ ಗ್ರೇಡ್ 2 ಇಂಜಿನಿಯರ್ ‌ಶಂಕರಾಚಾರಿ ಅಮಾನತ್ತುಗೊಂಡ ಅಧಿಕಾರಿಯಾಗಿದ್ದಾರೆ.  

ಪಂಪು ಮೋಟಾರ್, ಕೊಳವೆ ಬಾವಿ ಕೊರಿಸುವಲ್ಲಿ  ಕೋಟ್ಯಾಂತರ ರೂ. ಅಕ್ರಮ ಎಸಗಿರುವ ಆರೋಪ ಕೇಳಿಬಂದಿದೆ.
ಅಕ್ರಮವಾಗಿ ಕೊರೆಸಿರುವ ಕೊಳವೆಬಾವಿಗಳ ಬಗ್ಗೆ ಸೂಕ್ತ ದಾಖಲೆಗಳಿಲ್ಲದೆ ಕಾರಣ ಸಿಇಒ ಗರಂ ಆಗಿದ್ದಾರೆ.  
ಚಿಂತಾಮಣಿ ತಾಲೂಕಿನ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಲ್ಲಿ ಘಟನೆ ನಡೆದಿದೆ.

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಲೈಟ್ ಕಂಬ