ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದ ಲೈಟ್ ಕಂಬ

ಗುರುವಾರ, 8 ನವೆಂಬರ್ 2018 (16:17 IST)
ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಒಂದು ಗಂಟೆಗೂ ಹೆಚ್ಚು ಸಮಯ ಲೈಟ್ ಕಂಬ  ಹೊತ್ತಿ ಉರಿದ ಘಟನೆ ನಡೆದಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಒಂದು ಗಂಟೆಗೂ ಹೆಚ್ಚು ಸಮಯ ಲೈಟ್ ಕಂಬ ಹೊತ್ತಿ ಉರಿಯುತ್ತಿದ್ದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನ ಇಡಗೂರು ಗ್ರಾಮದಲ್ಲಿ ನಡೆದಿದೆ.

ಊರ ಮಧ್ಯದಲ್ಲಿರುವ ಕಂಬದಲ್ಲಿ ಪದೇ ಪದೇ ಇದೇ ರೀತಿ ಹೊತ್ತಿ ಬೆಂಕಿ ಉರಿಯುತ್ತಿರುವ ಘಟನೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಇದು ಊರಿನ ಮುಖ್ಯ ರಸ್ತೆ ಆಗಿದ್ದು ಎಲ್ಲರೂ ಇಲ್ಲೆ ನಡೆದಾಡಬೇಕಾಗಿದೆ.  ಹಳೆಯ ಕಂಬಗಳಾಗಿದ್ದು ವಿದ್ಯುತ್ ತಂತಿಗಳ ನಡುವೆ ಅಂತರ ಕಮ್ಮಿ ಇರುವುದೇ ಅವಘಡಕ್ಕೆ ಕಾರಣವಾಗುತ್ತಿದೆ ಎನ್ನಲಾಗಿದೆ. ಹೆಚ್ಚಿನ ಅಪಾಯ ಸಂಭವಿಸುವ ಮೊದಲು ಅಧಿಕಾರಿಗಳು ಎಚ್ಚೆತ್ತುಕೊಳ್ಳಬೇಕಿದೆ.

ದೀಪಾವಳಿ ಹಬ್ಬದ ಪಟಾಕಿ ದೃಶ್ಯದಂತೆ ವಿದ್ಯುತ್ ಕಂಬದಲ್ಲಿ ಬೆಂಕಿ ಕಂಡ ಗ್ರಾಮಸ್ಥರು ಭಯದೊಂದಿಗೆ ಆಶ್ಚರ್ಯ ವ್ಯಕ್ತಪಡಿ ಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮರ್ಯಾದಾ ಹತ್ಯೆ ಪ್ರಕರಣ: ಮೂವರು ಆರೋಪಿಗಳ ಬಂಧನ