Select Your Language

Notifications

webdunia
webdunia
webdunia
webdunia

ಬೆಂಕಿಯ ಜ್ವಾಲೆಗೆ ಹಾಲು ಕೊಡುವ ಹಸು, ಕರು ಸಜೀವ ದಹನ

ದನದ ಕೊಟ್ಟಿಗೆ
ಮಧುಗಿರಿ , ಶುಕ್ರವಾರ, 26 ಅಕ್ಟೋಬರ್ 2018 (16:46 IST)
ದನದ ಕೊಟ್ಟಿಗೆಗೆ ಆಕಸ್ಮಿಕವಾಗಿ  ಬೆಂಕಿ ತಗುಲಿ ಹಸು ಹಾಗೂ ಎರಡು ಕರುಗಳು ಅಗ್ನಿಗಾಹುತಿಯಾಗಿವೆ.

ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಕೊಡ್ಲಾಪುರ ಗ್ರಾಮದಲ್ಲಿ ಘಟನೆ  ನಡೆದಿದೆ.  ಮಧ್ಯರಾತ್ರಿ ಸಮಯದಲ್ಲಿ ಇದ್ದಕ್ಕಿದ್ದಂತೆ ಅಗ್ನಿ ಅವಘಡ ನಡೆದಿದೆ. ಮುಂಜಾನೆ ಎದ್ದ ತಕ್ಷಣ ದನಕರುಗಳು ಸಜೀವ ದಹನವಾಗಿರುವ  ದೃಶ್ಯ ನೋಡಿ ರೈತ ಕಂಗಾಲಾಗಿದ್ದಾನೆ. ದನಕರುಗಳನ್ನು ಕಟ್ಟಿ ಹಾಕಲು ನಿರ್ಮಿಸಿದ್ದ ಗುಡಿಸಲಿಗೆ ಅಕಸ್ಮಿಕವಾಗಿ ಬೆಂಕಿ ಬಿದ್ದ ಹಿನ್ನೆಲೆಯಲ್ಲಿ, ಕೊಡ್ಲಾಪುರ ಗ್ರಾಮದ ವಾಸಿ ರಂಗಪ್ಪ ಎಂಬ ರೈತನ ಸ್ಥಿತಿ ತೀವ್ರ ಶೋಚನೀಯವಾಗಿದೆ. ಬೆಂಕಿಯ ಅವಘಡದಿಂದ ರೈತ ರಂಗಪ್ಪನಿಗೆ ಅಂದಾಜು 2 ಲಕ್ಷ ರೂ. ನಷ್ಟವಾಗಿದೆ. 

ಕೊಡಿಗೇನಹಳ್ಳಿ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪರಿಹಾರಕ್ಕಾಗಿ ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಹಾಸನ ಜಿಲ್ಲೆಗೆ ಒಲಿಯಲಿದೆಯೇ ಮತ್ತೊಂದು ಸಚಿವ ಸ್ಥಾನ?