Select Your Language

Notifications

webdunia
webdunia
webdunia
webdunia

ಹಾಸನ ಜಿಲ್ಲೆಗೆ ಒಲಿಯಲಿದೆಯೇ ಮತ್ತೊಂದು ಸಚಿವ ಸ್ಥಾನ?

ಹಾಸನ ಜಿಲ್ಲೆಗೆ ಒಲಿಯಲಿದೆಯೇ ಮತ್ತೊಂದು ಸಚಿವ ಸ್ಥಾನ?
ಹಾಸನ , ಶುಕ್ರವಾರ, 26 ಅಕ್ಟೋಬರ್ 2018 (16:42 IST)
ಹಾಸನ ಜಿಲ್ಲೆಗೆ ಮತ್ತೊಂದು ಸಚಿವ ಸ್ಥಾನ ಒಲಿಯಲಿದೆಯೇ? ಹೀಗೊಂದು ಚರ್ಚೆ ಈಗ ಮುನ್ನೆಲೆಗೆ ಬಂದಿದೆ.

ಹಾಸನದ ಸಕಲೇಶಪುರ ಜೆಡಿಎಸ್ ಶಾಸಕರಿಗೆ ದಕ್ಕಲಿದೆಯೇ ಅದೃಷ್ಟ ಎಂಬ ಚರ್ಚೆ ನಡೆಯುತ್ತಿದೆ. ಎನ್.ಮಹೇಶ್ ರಾಜಿನಾಮೆಯಿಂದ ತೆರವಾಗಿದ್ದ ಸಚಿವ ಸ್ಥಾನಕ್ಕೆ ಈ ನೇಮಕ ನಡೆಯಲಿದೆ ಎಂದು ಚರ್ಚೆ ಆರಂಭಗೊಂಡಿದೆ.
ಪರಿಶಿಷ್ಟ ಸಮುದಾಯದ ಶಾಸಕರಿಗೆ ಅವಕಾಶ ನೀಡುವಂತೆ ಒತ್ತಡ ಹೇರಲಾಗುತ್ತಿದೆ.

ಕಳೆದ ಬಾರಿ ಕೊನೆಕ್ಷಣದಲ್ಲಿ ಕೈತಪ್ಪಿದ್ದ ಸಚಿವ ಸ್ಥಾನ, ಹೀಗಾಗಿ ಜೆಡಿಎಸ್ ವಲಯದಲ್ಲಿ ಪ್ರಬಲವಾಗಿ ಕೇಳಿಬರುತ್ತಿದೆ ಕುಮಾರಸ್ವಾಮಿ ಹೆಸರು.

ನಾನು ಸಚಿವ ಸ್ಥಾನದ ಆಕಾಂಕ್ಷಿ ಎಂದು ಶಾಸಕ ಹೆಚ್.ಕೆ.ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ.
ಪಕ್ಷದ ನಿರ್ಣಯಕ್ಕೆ ನಾನು ಬದ್ಧನಾಗಿದ್ದೇನೆ. ಹಿರಿಯ ಅನ್ನೋದಕ್ಕಿಂತ ಪಕ್ಷಕ್ಕೆ ನಿಷ್ಟಾವಂತನಾಗಿದ್ದೇನೆ. ನಮ್ಮ ಪಕ್ಷದ ನಾಯಕರು ಅವಕಾಶ ನೀಡುತ್ತಾರೆಂಬ ವಿಶ್ವಾಸವಿದೆ ಎಂದು ಸಕಲೇಶಪುರದಲ್ಲಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ ಇಂಗಿತ ವ್ಯಕ್ತಪಡಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಜಮಖಂಡಿ ಪ್ರಚಾರ ಸಭೆಯಲ್ಲಿ ಕೆ.ಸಿ.ವೇಣುಗೋಪಾಲ್ ಗರಂ ಆಗಿದ್ಯಾಕೆ?