Select Your Language

Notifications

webdunia
webdunia
webdunia
webdunia

ಹಾಸನಾಂಬೆ ದೇವಿ ದರ್ಶನ ಪಡೆದ ಅನಿತಾಕುಮಾರಸ್ವಾಮಿ‌ ಹೇಳಿದ್ದೇನು ಗೊತ್ತಾ?

ಹಾಸನಾಂಬೆ ದೇವಿ ದರ್ಶನ ಪಡೆದ  ಅನಿತಾಕುಮಾರಸ್ವಾಮಿ‌ ಹೇಳಿದ್ದೇನು ಗೊತ್ತಾ?
ಹಾಸನ , ಸೋಮವಾರ, 5 ನವೆಂಬರ್ 2018 (14:33 IST)
ಪ್ರತಿ ವರ್ಷ ದೇವಿ ದರ್ಶನಕ್ಕೆ ಬರುತ್ತೇನೆ. ಇಡೀ ರಾಜ್ಯದ ಜನರಿಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ. ರೈತರ ಸಂಕಷ್ಟ ಪರಿಹಾರ ಆಗಬೇಕು ಎಂದು ಅನಿತಾಕುಮಾರಸ್ವಾಮಿ ಪ್ರಾರ್ಥಿಸಿದ್ದಾರೆ.

ಹಾಸನಾಂಬೆ ದೇವಿ ದರ್ಶನ ಪಡೆದ ನಂತರ ಅನಿತಾಕುಮಾರಸ್ವಾಮಿ‌ ಹೇಳಿಕೆ ನೀಡಿದ್ದು, ರೈತರ ಸಮಸ್ಯೆಗಳನ್ನು ಬಗೆಹರಿಸುವ ಶಕ್ತಿಯನ್ನು ಸಿಎಂ ಕುಮಾರಸ್ವಾಮಿ ಅವರಿಗೆ ದೇವರು ನೀಡಲಿ ಎಂದಿದ್ದಾರೆ.

ಉಪಚುನಾವಣೆಯ ಐದು ಕ್ಷೇತ್ರಗಳಲ್ಲೂ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಗೆಲುವು ಖಚಿತ ಎಂದ ಅವರು, ರಾಮನಗರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುವುದೇ ನನ್ನ ಗುರಿ ಎಂದರು.

ಸಿಎಂ ಮಾರ್ಗದರ್ಶನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವೆ. ನಿಖಿಲ್ ಕುಮಾರಸ್ವಾಮಿ ರಾಜಕೀಯ ಪ್ರವೇಶ ಕುರಿತು ಚರ್ಚೆ ನಡೆದಿಲ್ಲ. ನಾನು ರಾಜಕೀಯಕ್ಕೆ ಬರುವುದು ಗೊತ್ತಿರಲಿಲ್ಲ ಎಲ್ಲಾ ದೈವೇಚ್ಚೆ. ನಿಖಿಲ್ ಮಾಡುವ ಒಳ್ಳೆಯ ಕೆಲಸಕ್ಕೆ ಸದಾ ನನ್ನ ಬೆಂಬಲವಿದೆ. ದೇವರು, ಜನರ ಆಶೀರ್ವಾದ ಇರುವವರಿಗೂ ರಾಜಕೀಯದಲ್ಲಿ ಇರುತ್ತೇವೆ. ಅವಕಾಶ ಸಿಕ್ಕಿದರೆ ಸಚಿವೆಯಾಗಿ ಕರ್ತವ್ಯ ನಿರ್ವಹಿಸುವೆ ಎಂದೂ ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಖನಿಜ ಭೂಮಿ ಸರ್ಕಾರಕ್ಕೆ ಮರಳಿ ಪಡೆಯಲು ಕ್ರಮವಹಿಸಿ ಎಂದ ಸಚಿವ