Select Your Language

Notifications

webdunia
webdunia
webdunia
webdunia

ಮೀ ಟೂ ಅಭಿಯಾನ: ಬಿಜೆಪಿಯ ಮೊದಲ ವಿಕೆಟ್ ಪತನ

ಮೀ ಟೂ
ನವದೆಹಲಿ , ಭಾನುವಾರ, 14 ಅಕ್ಟೋಬರ್ 2018 (17:13 IST)
ಮೀ ಟೂ ಅಭಿಯಾನಕ್ಕೆ ಬಿಜೆಪಿ ಪ್ರಭಾವಿ ಕೇಂದ್ರ ಸಚಿವನ ತಲೆದಂಡವಾಗಿದೆ. ಕೇಂದ್ರ ಸಚಿವ ಸ್ಥಾನಕ್ಕೆ ಅಕ್ಬರ್ ರಾಜೀನಾಮೆ ನೀಡಿದ್ದಾರೆ.

ಲೈಂಗಿಕ ಕಿರುಕುಳ ಆರೋಪಕ್ಕೆ ಗುರಿಯಾಗಿರುವ ವಿದೇಶಾಂಗ ವ್ಯವಹಾರಗಳ ರಾಜ್ಯ ಖಾತೆ ಸಚಿವ ಎಂ.ಜೆ.ಅಕ್ಬರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಮೀ ಟೂ ಅಭಿಯಾನಕ್ಕೆ ರಾಜಕೀಯದಲ್ಲಿ ಮೊದಲ ವಿಕೆಟ್ ಪತನವಾದಂತಾಗಿದೆ. ನೈಜೀರಿಯಾ ಪ್ರವಾಸದಿಂದ ಸ್ವದೇಶಕ್ಕೆ ಹಿಂದುರುಗಿದ ನಂತರ ಎಂ.ಜೆ.ಅಕ್ಬರ್ ತಮ್ಮ ರಾಜೀನಾಮೆ ಪತ್ರವನ್ನು ಪ್ರಧಾನ ಮಂತ್ರಿಯವರ ಕಾರ್ಯಾಲಯದ ಪ್ರಧಾನ ಕಾರ್ಯದರ್ಶಿ ನೃಪೇಂದ್ರ ಮಿಶ್ರ ಅವರಿಗೆ ಮೇಲ್ ಮೂಲಕ ತಲುಪಿಸಿದ್ದಾರೆ.

ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳ ಕುರಿತು ಚರ್ಚೆ ಮಾಡಲು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರ ಭೇಟಿಗೆ ಅವಕಾಶ ಕೇಳಿದ್ದಾರೆ ಎನ್ನಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ತರಗತಿ ನಡೆಸುತ್ತಿದ್ದ ವೇಳೆಯಲ್ಲೇ ಪ್ರಿನ್ಸಿಪಾಲ್ ರ ಕೊಲೆ