Select Your Language

Notifications

webdunia
webdunia
webdunia
webdunia

ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆಂಜನೇಯಲು ಹೇಳಿದ್ದೇನು ಗೊತ್ತಾ?

ಶ್ರೀರಾಮುಲು ವಿರುದ್ಧ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆಂಜನೇಯಲು ಹೇಳಿದ್ದೇನು ಗೊತ್ತಾ?
ಬಳ್ಳಾರಿ , ಭಾನುವಾರ, 14 ಅಕ್ಟೋಬರ್ 2018 (14:59 IST)
ಲೋಕಸಭಾ ಉಪಚುನಾವಣೆ ಬರಲು ಬಿಜೆಪಿ ನಾಯಕ ಶ್ರೀರಾಮುಲು ಕಾರಣ. ಎರಡೂ ಬಾರಿ ವಿಧಾನ ಸಭೆ, ಒಂದು ಬಾರಿ ಲೋಕಸಭೆಗೆ ರಾಜೀನಾಮೆ‌ ನೀಡಿದ್ದಾರೆ. ಹಾಗಾಗಿ ಪದೆ ಪದೇ ಬೈ ಎಲೆಕ್ಷನ್ ಗಣಿನಾಡಿನಲ್ಲಿ ಆಗ್ತಿದೆ ಎಂದು ಅಂಜನೇಯ ಅರೋಪಿಸಿದ್ದಾರೆ.

ಬಳ್ಳಾರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಆಂಜನೇಯಲು,  ಶ್ರೀರಾಮುಲು ಬಳ್ಳಾರಿ ಜನರಿಗೆ ಮಂತ್ರಿಯಾಗಲು ಬಳಕೆ ಮಾಡಿಕೊಳ್ಳುತ್ತಿದ್ದಿರಿ. ಒಂದು ಬಾರಿ ಅಧಿಕಾರಕ್ಕೆ ಬಂದಿದ್ದಕ್ಕೆ ಅಕ್ರಮ ಸಂಪತ್ತು ಲೂಟಿ ಮಾಡಿದ್ದಿರಿ ಎಂದು ಟೀಕಿಸಿದರು.

ಶ್ರೀರಾಮುಲು ಅರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಡಿ.ಕೆ.ಶಿವಕುಮಾರಗೆ ಜೈಲಿಗೆ ಕಳಿಸ್ತಿರಾ ನೀವು?  ತಾವು ಕೂಡ ಜೈಲಿಗೆ ಹೋಗ್ತಿರಿ ಅದು ಆಕುಲು ಲಕ್ಷ್ಮಮ್ಮರ 27 ಎಕರೆ ಭೂಮಿ ಕಬಳಿಸಿದ್ದಿರಿ ಎಂದರು.  ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ ಅಕ್ರಮವೆಸಗಿದ್ದಿರಿ, ಆ ಎರಡೂ ಕೇಸ್ ಗಳಲ್ಲಿ ಜೈಲಿಗೆ ಹೋಗ್ತಿರಿ ಎಂದು ಎಚ್ಚರಿಸಿದರು.  

ನಾಗೇಂದ್ರ ವಿರುದ್ಧ ತಾವು ಯಾಕೆ ಸ್ಪರ್ಧೆ ಮಾಡದೇ ಮೊಳಕಾಲ್ಮೂರು ಕ್ಷೇತ್ರಕ್ಕೆ ಹೋದ್ರಿ ಎಂದು ವ್ಯಂಗ್ಯವಾಡಿದ ಅವರು, ನಾವು ಚುನಾವಣೆಗೆ ನೀಲ್ತಿವಿ, ನೀವು ಬಳ್ಳಾರಿ ಜಿಲ್ಲೆಯಲ್ಲಿ ಚುನಾವಣೆ ನಿಲ್ರಿ. ನೀವು ಗೆಲ್ತಿರೋ, ನಾವು ಗೆಲ್ತಿವೋ ನೋಡೋಣ ಎಂದು ಸವಾಲ್ ಹಾಕಿದರು.

ಬಳ್ಳಾರಿ ಜನರಿಗೆ ನೀವು ಮೂರು ಬಾರಿ ಮೋಸ ಮಾಡಿದ್ದಿರಿ. ಬಳ್ಳಾರಿಗೇನು ಕೊಡುಗೆ ಕೊಟ್ಟಿದ್ದೀರಿ?  ಆರೋಗ್ಯ ಮಂತ್ರಿ ಇದ್ದಾಗ ಆಸ್ಪತ್ರೆಯಲ್ಲಿ ವೈದ್ಯರಿಲ್ಲಾ ಅಂದಾಗ ಜನರಿಗೆ ಏನು ಉತ್ತರ ಕೊಟ್ಟಿದ್ದಿರಿ?  ವಿಧಾನ ಸೌಧದಲ್ಲಿ ಏನು ಉತ್ತರ ನೀಡಿದ್ದಿರಿ? ಎಂದು ದೂರಿದರು.



Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸ್ಥಾನಕ್ಕಾಗಿ ಪಟ್ಟುಹಿಡಿದ ಶಾಸಕ ಬಿ.ಸಿ ಪಾಟೀಲ್