ಡಾ.ವಿಷ್ಣುವರ್ಧನ್ ಪುಣ್ಯಭೂಮಿಗಾಗಿ ಬೃಹತ್ ಪ್ರತಿಭಟನೆಯನ್ನ ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಂಡಿದೆ.ಡಾ.ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟ ಸೇರಿದಂತೆ ಅನೇಕ ಅಭಿಮಾನಿಗಳು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಮೇರು ನಟನ ಪುಣ್ಯಭೂಮಿ ಉಳಿವಿಗಾಗಿ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಗೆ ಸಜ್ಜಾಗಿದ್ದು,14 ವರ್ಷಗಳ ನಂತರವೂ ಸಮಸ್ಯೆ ಬಗೆಹರಿದಿಲ್ಲ.ಅಂತ್ಯಸಂಸ್ಕಾರ ವಾದ ಜಾಗವನ್ನು ಅಭಿವೃದ್ಧಿಪಡಿಸಲು ಮನವಿ ಮಾಡಿದ್ದು,ಹಿರಿಯ ನಟ ಬಾಲಣ್ಣನಿಗೆ ಅನುದಾನವಾಗಿ ನೀಡಿದ್ದ ಜಾಗ ವಿವಾದದ ಸುಳಿಯಲ್ಲಿ ಸಿಲುಕಿದೆ.20 ಎಕರೆ ಜಾಗವನ್ನು ಅಭಿಮಾನ್ ಸ್ಟುಡಿಯೋ ನಿರ್ಮಾಣಕ್ಕಾಗಿ 99 ವರ್ಷ ಅನುಧಾನವಾಗಿ ಬಾಲಣ್ಣ ಪಡೆದಿದ್ದ .ಈ ನಂತ್ರ 10 ಎಕರೆ ಭೂಮಿಯನ್ನು ಬಾಲಣ್ಣನ ಮಕ್ಕಳು ದುರಪಯೋಗ ಮಾಡಿಕೊಂಡಿದ್ದಾರೆ.
ಪುಣ್ಯ ಸ್ಮರಣೆ, ಪುಣ್ಯತಿಥಿ ಮಾಡಲು ಮಾಲೀಕರು ವಿರೋಧ ಮಾಡ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸುತ್ತಿದ್ದು,ಸರ್ಕಾರಕ್ಕೆ ಎರಡು ಕಡೆ ಸ್ಮಾರಕ ನಿರ್ವಹಿಸಲು ಕಷ್ಠವಾದರೆ ಅಭಿಮಾನ್ ಸ್ಟುಡಿಯೋದ ಜಾಗಕ್ಕೆ ತಗುಲುವ ವೆಚ್ಚ ನಾವೇ ಭರಿಸುತ್ತೇವೆ ಎಂದ ಅಭಿಮಾನಿಗಳ ಒಕ್ಕೂಟ ಹೇಳಿದ್ದು,ಸಮಸ್ಯೆ ಭಗೆಹರಿಸಿ ಎಂದು ಸರ್ಕಾರಕ್ಕೆ ತಾಕೀತು ಮಾಡಿದ್ದಾರೆ.ಈ ಹೋರಾಟದಲ್ಲಿ ಸರ್ಕಾರ ಸ್ಪಂದಿಸದೆ ಇದ್ರೆ ದೆಹಲಿಯಲ್ಲು ಹೋರಾಟಕ್ಕೆ ಪ್ಲಾನ್ ನಡೆಸಿದ್ದಾರೆ.
ಎಲ್ಲಾ ಮಂತ್ರಿಗಳ ಭಾಗವಹಿಸುವ ಕಾರ್ಯಕ್ರಮಗಳಲ್ಲಿ ಕಪ್ಪು ಪಟ್ಟಿ ಪ್ರದರ್ಶನ ಮಾಡಲು ಅಭಿಮಾನಿಗಳು ಚಿಂತನೆ ನಡೆಸಿದ್ದಾರೆ.ಈ ಹೋರಾಟಕ್ಕೆ ಕಿಚ್ಚ ಸುದೀಪ್ ಪರೋಕ್ಷವಾಗಿ ಸಾಥ್ ನೀಡಿದ್ದಾರೆ.
ಮೈಸೂರಿನಲ್ಲಿ ಸ್ನಾರಕವಾದ್ರೂ ಅಭಿಮಾನ್ ಸ್ಟುಡಿಯೋದಲ್ಲಿ ಪುಣ್ಯಭೂಮಿ ಆಗಬೇಕು ಎಂದ ಕಿಚ್ಚ ಒತ್ತಾಯಿಸಿದ್ದು,ನನ್ನ ನಿಲುವು ಅಂದು ಇಂದು ಒಂದೇನಾನು ನಿಮ್ಮ ,ಜೊತೆ ಇದ್ದೇನೆ ಎಂದು ಮುನ್ನೆಡೆಯಿರಿ ಎಂದು ಸುದೀಪ್ ಹೇಳಿದ್ದಾರೆ.ನನ್ನಿಂದಾಗು ಎಲ್ಲವನ್ನೂ ಪುಣ್ಯಭೂಮಿ ಗಾಗಿ ಮಾಡುವೆ ಎಂದ ಬಾದ್ ಷಾ ಸುದೀಪ್ ಹೇಳಿದ್ದಾರೆ.