Publish Date: Tue, 05 Dec 2023 (18:43 IST)
Updated Date: Tue, 05 Dec 2023 (18:57 IST)
ಸೋಮವಾರ ತಮಿಳುನಾಡು, ಆಂಧಪ್ರದೇಶ ಬಿಹಾರಕ್ಕೆ ಹೋಗಿ ಬರುವ ಹದಿನಾರು ರೈಲುಗಳು ರದ್ದಾಯಿತು. ಪರಿಣಾಮ ಇಲ್ಲಿನ ಕೆಎಸ್‌ಆರ್, ಸರ್ ಎಂ.ವಿಶ್ವೇ ಶ್ವರಯ್ಯ ರೈಲ್ವೇ ನಿಲ್ದಾಣಕ್ಕೆ ಬಂದಿದ್ದ ಪ್ರಯಾಣಿಕರು ಪರದಾಡಿದರು. ವಿಪರೀತ ಮಳೆ ಕಾರಣದಿಂದ ಮುಂದಿನ ಮೂರು ದಿನಗಳವರೆಗೆ ಹಲವು ರೈಲುಗಳ ಸಂಚಾರ ರದ್ದುಪಡಿಸಿರುವುದಾಗಿ ನೈಋತ್ಯ ರೈಲ್ವೇ ಇಲಾಖೆ ತಿಳಿಸಿದೆ.