Publish Date: Mon, 19 Aug 2019 (20:20 IST)
Updated Date: Mon, 19 Aug 2019 (20:23 IST)
ಸಂಸದೆಯಾಗಿ ಆಯ್ಕೆಯಾದ ಬಳಿಕ ಮೊದಲ ಬಾರಿಗೆ ಮೈಸೂರು ಅರಮನೆಗೆ ಭೇಟಿ ನೀಡಿದ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ರಾಜವಂಶಸ್ಥರ ಕುಶಲೋಪರಿ ವಿಚಾರಿಸಿದ್ರು.
ರಾಜವಂಶಸ್ಥ ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ರು.
ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರೊಂದಿಗೆ ಸಂಸದೆ ಸುಮಲತಾ ಅಂಬರೀಶ್,
ದಿವಂಗತ ಅಂಬರೀಶ್ ಅವರು ಅರಮನೆಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಚುನಾವಣೆ ಸಂದರ್ಭದಲ್ಲಿ ಕೆಲಸ ಕಾರ್ಯಗಳಲ್ಲಿ ನಿರತವಾಗಿದ್ದ ಕಾರಣ ರಾಜವಂಶಸ್ಥರನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ.
ಈಗ ಭೇಟಿಯಾಗಿದ್ದೇನೆ ಇದರಲ್ಲಿ ರಾಜಕೀಯ ವಿಚಾರಗಳು ಇಲ್ಲ. ಇದೊಂದು ಸೌಹಾರ್ಧ ಭೇಟಿ ಎಂದು ಸುಮಲತಾ ಅಂಬರೀಶ್ ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೋಗಳನ್ನು ಹಾಕಿಕೊಂಡಿದ್ದಾರೆ.