ಸಿಎಂ ಸಂಬಂಧಿಯನ್ನು ಮೈಸೂರು ಡೈರಿ ನಿರ್ದೇಶಕರಾಗಿ ನೇಮಿಸಿದ ಸರ್ಕಾರದ ಆದೇಶಕ್ಕೆ ಜೆಡಿಎಸ್ ಕಿಡಿ

ಶುಕ್ರವಾರ, 9 ಆಗಸ್ಟ್ 2019 (14:24 IST)
ಮೈಸೂರು : ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿಗೆ ಅಧಿಕಾರೇತರ ಸದಸ್ಯರಾಗಿ ಸಿಎಂ ಯಡಿಯೂರಪ್ಪನವರ ಸಹೋದರಿಯ ಪುತ್ರ ಎಚ್.ಸಿ. ಅಶೋಕ್ ಅವರು ನೇಮಕಗೊಂಡಿದ್ದಾರೆ.
ಸಿಎಂ ಯಡಿಯೂರಪ್ಪನವರ ಸಹೋದರಿಯ ಪುತ್ರ ಎಚ್.ಸಿ. ಅಶೋಕ್ ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಹಾಲು ಒಕ್ಕೂಟದ ಆಡಳಿತ ಮಂಡಳಿಗೆ ಅಧಿಕಾರೇತರ ಸದಸ್ಯರಾಗಿ ನೇಮಕಗೊಂಡಿದ್ದರು. ಇದೀಗ ಮತ್ತೆ ಅವರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದ್ದಕ್ಕೆ ಜೆಡಿಎಸ್ ಕಿಡಿಕಾರಿದೆ.


ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್, ಉತ್ತರ ಕರ್ನಾಟಕದ ಜನ ನೆರೆಹಾವಳಿಯಿಂದ ತತ್ತರಿಸುತ್ತಿದ್ದರೆ, ಸಿಎಂ ತಮ್ಮ ಸಂಬಂಧಿಕರಿಗೆ ಅಧಿಕಾರ ಹಂಚುವುದರಲ್ಲಿ ನಿರತರಾಗಿದ್ದಾರೆ ಎಂದು ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗುಡ್ಡ ಕುಸಿತ ಹಿನ್ನಲೆ; ಕಳಸ – ಮಂಗಳೂರು ಸಂಚಾರ ಬಂದ್