Publish Date: Mon, 05 Aug 2019 (19:28 IST)
Updated Date: Mon, 05 Aug 2019 (19:30 IST)
ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಿ ಒಂದು ವಾರದ ಬಳಿಕ ದೆಹಲಿಗೆ ಮುಖ್ಯಮಂತ್ರಿ ತೆರಳುತ್ತಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ತಳಮಳ ಶುರುವಾಗಿದೆ.
ರಾಜ್ಯ ಸಚಿವ ಸಂಪುಟ ರಚನೆ ಮಾಡಬೇಕಿರೋ ಸಿಎಂ ಬಿ.ಎಸ್.ಯಡಿಯೂರಪ್ಪ ಸಚಿವರಾಗೋರ ಪಟ್ಟಿಯೊಂದಿಗೆ ಹೈ ಕಮಾಂಡ್ ಭೇಟಿಗೆ ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ.
ಕೇಂದ್ರ ಸಚಿವರು ಹಾಗೂ ಹೈಕಮಾಂಡ್ ನ ಪ್ರಮುಖರೊಂದಿಗೆ ಚರ್ಚೆ ನಡೆಸಲಿರೋ ಸಿಎಂ ಯಡಿಯೂರಪ್ಪ, ಸಚಿವರ ಪಟ್ಟಿಗೆ ಅನುಮೋದನೆ ಪಡೆದುಕೊಳ್ಳಲಿದ್ದಾರೆ.
ಕೆಲವು ಮಹತ್ವದ ವಿಚಾರಗಳು ಅಲ್ಲದೇ ರಾಜ್ಯಕ್ಕೆ ದೊರಕಬೇಕಾದ ಅನುದಾನ ಬಗೆಗೂ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.