ಇನ್ನು ಸಂಪುಟ ರಚನೆ ಮಾಡದ ಸಿಎಂ ಬಿಎಸ್ ವೈ ಗೆ ಏಕಚಕ್ರಾಧಿಪತಿಗಳೇ ಎಂದು ಕಾಲೆಳೆದ ಸಿದ್ದರಾಮಯ್ಯ

ಶುಕ್ರವಾರ, 9 ಆಗಸ್ಟ್ 2019 (14:38 IST)
ಬೆಂಗಳೂರು : ಸಚಿವ ಸಂಪುಟ ರಚನೆ ಮಾಡದೇ ರಾಜ್ಯದ ಸಿಎಂ ಆಗಿ ಅಧಿಕಾರ ನಡೆಸುತ್ತಿರುವ ಬಿಎಸ್ ಯಡಿಯೂರಪ್ಪ ಅವರು ರಾಜ್ಯದಲ್ಲಿ ನೆರೆ ಸಂತ್ರಸ್ತರ ನೆರವಿಗೆ ಓಡಾಡುತ್ತಿರುವುದನ್ನು ಕಂಡು ಮಾಜಿ ಸಿಎಂ ಸಿದ್ದರಾಮಯ್ಯ ಸಿಎಂ ಯಡಿಯೂರಪ್ಪನವರನ್ನು ಏಕಚಕ್ರಾಧಿಪತಿಗಳೇ ಎಂದು ವ್ಯಂಗ್ಯ ಮಾಡಿದ್ದಾರೆ.
ಮೈಸೂರು ಹಾಲು ಒಕ್ಕೂಟದ ಅಧಿಕಾರೇತರ ಸದಸ್ಯರಾಗಿ ಬಿಎಸ್‍ವೈ ಸಂಬಂಧಿಗಳನ್ನ ನೇಮಕ ಮಾಡಿರುವ ಬಗ್ಗೆ ಪ್ರಶ್ನೆ ಮಾಡುತ್ತಾ ಟ್ವೀಟ್ ಮಾಡಿರುವ ಸಿದ್ದರಾಯ್ಯ ಅವರು, ಕೆಎಂಎಫ್‍ಗೆ ಸಂಬಂಧಿಕರನ್ನು ನೇಮಿಸುವ ಬದಲು ಸಂಪುಟ ರಚನೆ ಮಾಡಿದ್ದರೆ ಪ್ರವಾಹ ಪರಿಸ್ಥಿತಿಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಎದುರಿಸಬಹುದಿತ್ತಲ್ಲವೇ ಏಕ್ರಚಕ್ರಾಧಿಪತಿಗಳೇ ಎಂದು ಲೇವಡಿ ಮಾಡಿದ್ದಾರೆ.


ಅಲ್ಲದೇ ಸಂಪುಟ ಸದಸ್ಯರ ಅನುಮೋದನೆಗೆ ಸಮಯವಿಲ್ಲದ ನಿಮ್ಮ ಹೈಕಮಾಂಡ್, ಕೆಎಂಎಫ್‍ಗೆ ಸದಸ್ಯರನ್ನ ನೇಮಕಕ್ಕೆ ಆದ್ಯತೆ ನೀಡಲು ಹೇಳಿತ್ತೆ ಎಂದು ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಉ.ಕ ನೆರೆ ಸಂತ್ರಸ್ತರಿಗೆ ಒಂದು ತಿಂಗಳ ಸಂಬಳ ನೀಡಲು ಮುಂದಾದ ಜೆಡಿಎಸ್ ಶಾಸಕರು