ಕುಮಾರಸ್ವಾಮಿ ನನ್ನ ಫೋನ್ ಕದ್ದಾಲಿಕೆ ಮಾಡಿದ್ದಾರೆ-ಎಚ್.ವಿಶ್ವನಾಥ್ ಆರೋಪ

ಬುಧವಾರ, 14 ಆಗಸ್ಟ್ 2019 (11:32 IST)
ಮೈಸೂರು: ಟೆಲಿಫೋನ್ ಕದ್ದಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಎಚ್.ಡಿ.ಕುಮಾರಸ್ವಾಮಿ ನನ್ನ ಫೋನ್ ಕದ್ದಾಲಿಕೆ ಮಾಡಿದ್ದಾರೆ ಎಂದು ಅನರ್ಹ ಶಾಸಕ ಎಚ್.ವಿಶ್ವನಾಥ್ ಆರೋಪಿಸಿದ್ದಾರೆ.ಈ ಬಗ್ಗೆ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಶಾಸಕನಾಗಿ, ರಾಜಾಧ್ಯಕ್ಷನಾಗಿ ನನ್ನ ಮೇಲೆ ನಂಬಿಕೆ ಇಲ್ಲ. ಹೆಚ್. ಡಿ.ಕೆ ಯಾರ್ಯಾರು ಏನೇನ್ ಮಾತಾಡಿದ್ದಾರೆ ಅಂತ ಹೇಳಿದ್ದಾರೆ. ಅತೃಪ್ತ ಶಾಸಕರೆಲ್ಲರ ಫೋನ್ ಗಳು ಕದ್ದಾಲಿಕೆ ಆಗಿದೆ. ಅದನ್ನ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿದ್ದಾರೆ. ನಾವು ರಾಜೀನಾಮೆ ಕೊಡಲು ಇದು ಸಹ ಮುಖ್ಯ ಕಾರಣ ಎಂದು ಹೇಳಿದ್ದಾರೆ.


ನಾನು ನನ್ನ ಪತ್ನಿ ಫೋನ್ ಕದ್ದಾಲಿಕೆ ಮಾಡೋದು ಅಪರಾಧವೇ. ಬೆಂಗಳೂರು ಕಮಿಷನರ್ ಫೋನ್ ಕೂಡ ಕದ್ದಾಲಿಕೆ ಆಗ್ತಿದೆ. ಈ ಬಗ್ಗೆ ಸೂಕ್ತ ತನಿಖೆ ಮಾಡುವಂತೆ ಸಿಎಂ ಯಡಿಯೂರಪ್ಪ ರಿಗೆ ನಾನು ಮನವಿ ಮಾಡುವೆ ಎಂದು ಅವರು  ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಮೈತ್ರಿ ಸರ್ಕಾರದ ವೇಳೆ ನಡೆದಿತ್ತಾ ಫೋನ್ ಕದ್ದಾಲಿಕೆ