Publish Date: Thu, 28 Apr 2022 (14:16 IST)
Updated Date: Thu, 28 Apr 2022 (14:23 IST)
ಪ್ರೀತಿಸಲು ನಿರಾಕರಿಸಿದ್ದಕ್ಕೆ ಯುವತಿ ಮೇಲೆ ಆ್ಯಸಿಡ್ ದಾಳಿ ನಡೆಸಿರುವ ಘಟನೆ ಬೆಂಗಳೂರಿನಲ್ಲಿ ಸುಂಕದಕಟ್ಟೆ ಮುತ್ತೂಟ್ ಫಿನ್ ಕಾರ್ಟ್ ನಲ್ಲಿ ನಡೆದಿದೆ.
ಬಿಕಾಂ ಪದವೀಧರೆ ಆಗಿದ್ದ ಹೆಗ್ಗನಹಳ್ಳಿ ನಿವಾಸಿ ಯುವತಿ ಮೇಲೆ ಅದೇ ಬಡಾವಣೆಯ ನಿವಾಸಿ ನಾಗೇ ಶ್ ಆಸಿಡ್ ಎರಚಿದ್ದಾನೆ. ನಾಗೇಶ್ ಪರಾರಿಯಾಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಯುವತಿ ೮ ತಿಂಗಳ ಹಿಂದೆಯಷ್ಟೇ ಮುತ್ತೂಟ್ ಫಿನ್ ಕಾರ್ಟ್ ನಲ್ಲಿ ಕೆಲಸಕ್ಕೆ ಸೇರಿಸಿದ್ದಳು. ನಾಗೇಶ್ ನನ್ನನ್ನು ಪ್ರೀತಿಸು ಎಂದು ಹಿಂದೆ ಬಿದ್ದಿದ್ದ. ಆದರೆ ನೀನು ನನ್ನ ಅಣ್ಣನಂತೆ ಇದ್ದಿಯಾ ನಾನು ಪ್ರೀತಿಸುವುದಿಲ್ಲ ಎಂದು ಯುವತಿ ಹೇಳಿದ್ದಳು. ಇದರಿಂದ ಆಕ್ರೋಶಗೊಂಡ ನಾಗೇಶ್ ಈ ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.