Publish Date: Wed, 22 Jan 2020 (10:12 IST)
Updated Date: Wed, 22 Jan 2020 (10:15 IST)
ಮಂಗಳೂರು : ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜೀವ ಬಾಂಬ್ ಇಟ್ಟಿದ್ದ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.
ಉಡುಪಿ ಮೂಲದ ಆದಿತ್ಯರಾವ್ ಬಾಂಬ್ ಇಟ್ಟ ಆರೋಪಿಯಾಗಿದ್ದು,ಈತ ಇಂಜಿನಿಯರಿಂಗ್ ಪದವೀಧರನಾಗಿದ್ದನು ಎಂಬ ಮಾಹಿತಿ ತಿಳಿದುಬಂದಿದೆ.
ಡಿಜಿ ಮತ್ತು ಐಜಿಪಿ ನೀಲಮಣಿ ಎನ್.ರಾಜು ಎದುರು ಶರಣಾದ ಆದಿತ್ಯರಾವ್ , ಮಂಗಳೂರು ಏರ್ ಪೋರ್ಟ್ ನಲ್ಲಿ ಬಾಂಬ್ ಇಟ್ಟಿದ್ದು ನಾನೇ ಎಂದು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ.