Select Your Language

Notifications

webdunia
webdunia
webdunia
webdunia

ಗಗನಕ್ಕೆ ಜಿಗಿತಾನೆ ಮಾನವ.....! ಚಂದ್ರಯಾನದ ಬಳಿಕ ಗಗನಯಾನ...!

twitter

geetha

bangalore , ಭಾನುವಾರ, 3 ಮಾರ್ಚ್ 2024 (12:00 IST)
ಬೆಂಗಳೂರು-ಭಾರತದ ಬಾಹ್ಯಾಕಾಶ ಲೋಕದ ಮಹಾತ್ವಾಕಾಂಕ್ಷಿ ಯೋಜನೆ ಚಂದ್ರಯಾನ-3 ಗಗನನೌಕೆ ನಭಕ್ಕೆ ಚಿಮ್ಮಿತ್ತು. ಚಂದ್ರಯಾನ-3 ನೌಕೆಯನ್ನು ಇಸ್ರೋ ಯಶಸ್ವಿಯಾಗಿ ಉಡಾವಣೆಗೊಳಿಸಿತ್ತು.. ಹಾಗಾಗಿ ಆ ಕ್ಷಣವನ್ನ ಕಣ್ಣು ತುಂಬಿಕೊಂಡ ಇಸ್ರೋ ವಿಜ್ಞಾನಿಗಳಲ್ಲಿ ಸಂಭ್ರಮ ಮುಗಿಲು ಮುಟ್ಟಿತ್ತು.ಚಂದ್ರನ ಮೇಲಿರುವ ಖನಿಜ, ನೀರು ಹಾಗೂ ಕಂಪನದ ಬಗ್ಗೆ ಅಧ್ಯಯನ ನಡೆಸಿದ್ದ ಬಹು ನಿರೀಕ್ಷೆಯ `ಚಂದ್ರಯಾನ೩' ಬಾಹ್ಯಾಕಾಶ ನೌಕೆ ಆಕಾಶಕ್ಕೆ ಚಿಮ್ಮಿದ ಬಳಿಕ ಕೊನೆಗೂ ಚಂದ್ರಯಾನ ಯಶಸ್ವಿ ಆಗಿತ್ತು.... ಅದು ಇಡೀ ಜಗತ್ತೇ ಕೊಂಡಾಡುವ ಮಟ್ಟಿಗೆ. ಭಾರತದ ಹೆಮ್ಮೆಯ ಹಾಗೂ ಭಾರೀ ನಿರೀಕ್ಷೆಯನ್ನ ಹುಟ್ಟು ಹಾಕಿದ್ದ ಚಂದ್ರಯಾನ-೩ಯೂ ಅಂದುಕೊAಡ ಹಾಗೇಯೇ ಆಕಾಶದಲ್ಲಿ ಹೊಸ ಕ್ರಾಂತಿಯನ್ನ ಸೃಷ್ಟಿಸಿದ್ದಾಗಿದೆ.

ಯಾರು ಊಹಿಸದ ರೀತಿಯಲ್ಲಿ ಇಸ್ರೋ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗುವ ರೀತಿಯಲ್ಲಿ ಹಲವು ಕ್ರಾಂತಿಕಾರಕ ಯೋಜನೆಗಳನ್ನು ಮಾಡುತ್ತಾ ಬಂದಿದೆ.. ಹಾಗೇ ಮೂರನೇ ಚಂದ್ರಯಾನವನ್ನು ಯಶಸ್ವಿಯಾಗಿ ಮುಗಿಸಿ, ಇದೀಗ ಮತ್ತೊಂದು ಮೈಲಿಗಲ್ಲುನ್ನು ಸೃಷ್ಟಿಸಲು ಇಸ್ರೋ ದಾಪುಗಲು ಇಟ್ಟಿದೆ.ಚಂದ್ರಯಾನ-3 ಅನ್ನೋದು ಭಾರತದ ಹಿರಿಮೆಗೆ ಸಾಕ್ಷಿಯಾಗ್ತಿದೆ. ಅದರಲ್ಲೂ ಜಾಗತಿಕವಾಗಿ ಇಸ್ರೋದ ಸಾಧನೆಯನ್ನು ಕೊಂಡಾಡಲಾಗುತ್ತಿದೆ. ಹೀಗೆ ಒಂದಾದ ಮೇಲೊಂದು ಐತಿಹಾಸಿಕ ಕ್ಷಣಗಳಿಗೆ ಮುನ್ನುಡಿ ಬರೆಯಲು ತುದಿಗಾಲಿನಲ್ಲಿ ನಿಂತಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆಯೂ ಮತ್ತೆ ಹೊಸ ಮೈಲಿಗಲ್ಲನ್ನು ಸ್ಥಾಪಿಸುವ ಸಾಹಸಕ್ಕೆ ಕೈ ಹಾಕುತ್ತಿದೆ.
 
ಯೆಸ್..... ಭಾರತವೂ ಬೆಳಗುತ್ತಿದೆ... ಹೊಸ ಹೊಸ ವಿದ್ಯಮಾನಗಳ ಮೂಲಕ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತ ಸಂದರ್ಭವನ್ನು 21ನೇ ಶತಮಾನದ ಭಾಗವಾಗಿ ವಿಶ್ವಗುರು ಭಾರತ ಮಾಡಲು ಹೊರಟಿದೆ.. ಚಂದ್ರಯಾನ ಹಿಟ್ ಆದ ಬಳಿಕ, ಗಗನಯಾನಕ್ಕೆ ಮಾನವನನ್ನು ಜಿಗಿಸಲು ಪ್ಲಾನ್ ಹಾಕಿಕೊಂಡಿದೆ... ಎಲ್ಲವೂ ಅಂದುಕೊAಡAತೆ ಆಗೆ ಹೋದ್ರೆ ಮುಂದಿನ ವರ್ಷದಲ್ಲೇ ಇದು ಸಾಕಾರಗೊಳ್ಳಲಿದೆ.
 
ಭಾರತದ ಹೆಮ್ಮೆ.... ದೇಶದ ಹಿರಿಮೆ.... ಬಾಹ್ಯಾಕಾಶ ಕ್ಷೇತ್ರದ ಅತಿ ದೊಡ್ಡ ಶಕ್ತಿ, ಆಧಾರ ಸ್ತಂಭ... ನಮ್ಮ ಇಸ್ರೋ.... ಹಾಗೆ ನೋಡಿದರೆ ಇದುವರೆಗೂ ನಭಾಗೇ ಹೋಗಿ ಚಿಮ್ಮಿ ಬಂದ ಭಾರತದ ಗಗನನೌಕೆಗಳು ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ.... ನಾಸಾ ಸೇರಿದಂತೆ ಜಗತ್ತಿನ ಹಲವು ಬಾಹ್ಯಾಕಾಶ ಕೇಂದ್ರಗಳಿಗೆ ಹೋಲಿಸಿಕೊಂಡರೆ ಮಾಡಬೇಕಿರೋದು ಇನ್ನೂ ಸಾಕಷ್ಟಿದೆ. ಸಾಧಿಸುವುದು ಬಹಳಷ್ಟಿದೆ.... ಹಾಗಾಗಿ ಚಂದ್ರನೂರಿಗೆ ತೇರು ಹೋಗಿ ಬಂದ ನಂತರ ಮಾನವವನ್ನು ಗಗನಕ್ಕೆ ಜಿಗಿಸಲು ಇಸ್ರೋ ಸಜ್ಜಾಗಿದೆ.
 
2025ರಲ್ಲಿ ಗಗಗನಕ್ಕೆ ಜಿಗಿಯಲು ರೆಡಿ ಆಗಿರುವ ಮಾನವನಿಗೆ  ಇಸ್ರೋ ಸಕಲ ರೀತಿಯಲ್ಲೂ ಬೆಂಬಲವನ್ನು ನೀಡ್ತಿದೆ.... ಇದಕ್ಕಾಗಿ ನಾಲ್ಕು ಮಂದಿ ಗಗನಯಾನಿಗಳನ್ನು ಇಸ್ರೋ ಆಯ್ಕೆ ಮಾಡಿತ್ತು.... ಅದೇ ರೀತಿ ಗಗನಯಾನಿಗಳು ಯಾರು ಎಂಬುದನ್ನು ಪ್ರಧಾನಿ ಮೋದಿಯೇ ಬಹಿರಂಗಪಡಿಸಿದ್ದಾರೆ.
 
ಬಾಹ್ಯಾಕಾಶದಲ್ಲಿ ಹೊಸ ಹೊಸ ಸಾಧನೆಗಳನ್ನು ಮಾಡಿ ಮೈಲಿಗಲ್ಲುನ್ನು ಸೃಷ್ಟಿಸಬೇಕೆಂಬುದು ಎಲ್ಲ ದೇಶಗಳ ಹೆಬ್ಬಯಕೆ. ಈಗ ಭಾರತವೂ ಕೂಡ ಬಾಹ್ಯಾಕಾಶ ಕ್ಷೇತ್ರದಲ್ಲಿ ಇನ್ನೂ ಏನೋ ಮಾಡಬೇಕೆಂಬ ಹಠಕ್ಕೆ ಬಿದ್ದಂತೆ ಕಾಣುತ್ತಿದೆ.... ಯಾಕಂದ್ರೆ ಚಂದ್ರಯಾನ-೩ ಈ ಪಾಟಿ ಯಶಸ್ಸು ಆಗಿದ್ದೇ, ಇಸ್ರೋಗೆ ಆತ್ಮವಿಶ್ವಾಸ ಇಮ್ಮುಡಿಗೊಂಡಿದೆ... ಹೊಸತನ, ಭರವಸೆ ಮೂಡಿದೆ ಹಾಗಾಗಿ ಅದರ ಭಾಗವೇ ಈ ಗಗನಯಾನ...?
 
ಪ್ರೀಯ ವೀಕ್ಷಕರೇ ಚಂದ್ರಯಾನದ ಗುಂಗಿನಲ್ಲಿ, ಇದೀಗ ಇಸ್ರೋ ಮತ್ತೊಂದು ಸಾಹಸವನ್ನು ಮಾಡಲು ಹೊರಟಿದೆ... ಅದೇ ಚರಿತ್ರೆಯನ್ನ ಬರೆಯಲು ಅರ್ಹವಾದ ಐತಿಹಾಸಿಕವಾದ ಗಗನಯಾನ ಆದ್ರೆ ಇದು ಇಸ್ರೋ ಮಾಡಲು ಬಯಸಿರೋದು ಯಾವಾಗಿನಿಂದ ಅಂದರೇ ನೆಕ್ಸ್ಟ್ ಇಯರ್ ಎಂದು  ಥಟ್ ಅಂತ ಹೇಳಬಹುದು.
 
ಹೌದು... ಇಸ್ರೋ ವಿಜ್ಞಾನಿಗಳು ಮಹತ್ವದ ಯೋಜನೆಯಾದ ಗಗನಯಾನಕ್ಕೆ ಈಗಿನಿಂದಲೇ ಸಿದ್ಧತೆ ಅರಂಭಿಸಿದ್ದಾರೆ. ಹಾಗೆ ನೋಡಿದರೆ ಎಲ್ಲವೂ ಅಂದುಕೊಂಡಂತೆ ಆಗೆ ಹೋದ್ರೆ, 2025ರ ಅರಂಭದಲ್ಲಿಯೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಚರಿತ್ರೆ ಸೃಷ್ಟಿಯಾಗಿ ಬಿಡಲಿದೆ.ಇನ್ನೂ ಭಾರತದ ಇಸ್ರೋ ವಿಜ್ಞಾನಿಗಳು ಮಾಡಲೇ ಸಿದ್ಧ ಎಂದಿರುವ, ಮಾನವ ಸಹಿತ ಗಗನಯಾನಕ್ಕೆ ರಷ್ಯಾದಲ್ಲಿ ೧೩ ತಿಂಗಳು ತರಬೇತಿ ಪಡೆದು ಬಂದಿರುವ ನಾಲ್ವರು ಪೈಲಟ್ಗಳು ಉತ್ಸುಕರಾಗಿದ್ದಾರೆ.
 
ಆತ್ಮವಿಶ್ವಾಸ, ನಂಬಿಕೆ, ಕಾರ್ಯದಕ್ಷತೆ, ಪರಿಶ್ರಮ, ಸಾಧಿಸುವ ಹಸಿವು, ಎಂಥದ್ದೇ ಸಂದರ್ಭ ಎದುರಾದರೂ, ಅಂದುಕೊAಡದ್ದನ್ನ ಮಾಡ್ತೀವಿ ಅನ್ನುವ ದಿಟ್ಟತನವನ್ನ ಪ್ರದರ್ಶಿಸುವಂತೆ ಮಾಡಿ ಬಿಡುತ್ತದೆ... ಬಹುಶಃ ಇದೀಗ ಇಸ್ರೋ ವಿಜ್ಞಾನಿಗಳ ಮನದಾಳದಲ್ಲಿ ಇಂತಹದ್ದೇ ಇಚ್ಚಾಶಕ್ತಿ ಮೂಡಿರಬಹುದು......!?
 
ಒಂದು ನಿರ್ಜೀವ ವಸ್ತುವಿನ ಬಗ್ಗೆಯೇ ನಮಗಿಷ್ಟು ತಣಿಯದ ಕುತೂಹಲ. ಇನ್ನು ನಮ್ಮ ನಿಮ್ಮಂತೆ ಕಣ್ಣು, ಮೂಗು, ಕೈಕಾಲು, ಹೃದಯವಿರುವ ಮಾನವ ಜೀವ ಬಾಹ್ಯಾಕಾಶದಲ್ಲಿ ಹಾರಾಟ ನಡೆಸಿದರೆ..? ಇನ್ಯಾಗೀರಬೇಡ.ನಾವೆಲ್ಲ ಚಂದ್ರಯಾನದ ಗುಂಗಿನಲ್ಲಿ ಮುಳುಗಿರುವಾಗ, ಇಸ್ರೋ ಮಾನವಸಹಿತ ಗಗನಯಾನಕ್ಕೆ ಇನ್ನೊಂದು ಬದಿಯಲ್ಲಿ ಸದ್ದಿಲ್ಲದೆ ತಯಾರಿ ನಡೆಸುತ್ತಿದೆ.
 
ಹೌದು... ಇಸ್ರೊ ಹಾಕಿಕೊಂಡಿರುವ ಯೋಜನಾ ಪಟ್ಟಿಯಂತೆ ಎಲ್ಲ ಘಟಿಸಿದರೆ, ೨೦೨೫ರ ಆರಂಭದಲ್ಲಿ ಗಗನಯಾನ ನಡೆಯಲಿದೆ. ಈಗಾಗಲೇ ಭಾರತೀಯ ವಾಯುಪಡೆಯ ನಾಲ್ವರು ಪೈಲಟ್ಗಳು ರಷ್ಯಾದಲ್ಲಿ 13 ತಿಂಗಳು ತರಬೇತಿಗೊಂಡು, ಇದೀಗ ಅಧಿಕೃತವಾಗಿ ಮೋದಿಯವರಿಂದಲೇ ಅವರ ಹೆಸರು ಬಹಿರಂಗಗೊಂಡಿದೆ.ಹಾಗೇನಾದರೂ ಎಲ್ಲವೂ ಅಂದುಕೊಂಡಂತೇ ಆಗಿ ಬಿಟ್ರೆ, ಭಾರತೀಯ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಚರಿತ್ರೆ ಬರೆದಂತಾಗುತ್ತೆ.. ಇನ್ನೂ ಅಮೆರಿಕಾದ ನಾಸಾವನ್ನ ಬೆರಗುಗೊಳಿಸುವಂತಹ ಸಾಧನೆಯನ್ನ ಮಾಡಲು ಹೊರಟಿರುವ ಇಸ್ರೋ, ಸದ್ದಿಲ್ಲದೇ ಚುರುಕಿನ ತಯಾರಿ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಬಿನೆಟ್ ಏನು ನಿರ್ಧಾರ ತೆಗೆದುಕೊಳ್ಳುತ್ತದೆ ಅದರಂತೆ ಮುಂದುವರಿಯೋಣ- ಪರಮೇಶ್ವರ್