Select Your Language

Notifications

webdunia
webdunia
webdunia
webdunia

ಗಗನಯಾನ ಮಿಷನ್ ಗೆ ಆಯ್ಕೆಯಾದ ನಾಲ್ವರು ಯಾತ್ರಿಗಳನ್ನು ಬಹಿರಂಗಪಡಿಸಿದ ಮೋದಿ

Gaganyaan

Krishnaveni K

ತಿರುವನಂತಪುರಂ , ಮಂಗಳವಾರ, 27 ಫೆಬ್ರವರಿ 2024 (13:31 IST)
ತಿರುವನಂತಪುರಂ: ಐತಿಹಾಸಿಕ ಗಗನಯಾನ ಮಿಷನ್ ನಲ್ಲಿ ಭಾಗಿಯಾಗಲಿರುವ ನಾಲ್ವರು ಗಗನಯಾತ್ರಿಗಳನ್ನು ಪ್ರಧಾನಿ ಮೋದಿ ಇಂದು ಬಹಿರಂಗಪಡಿಸಿದ್ದಾರೆ.
 
ಇಸ್ರೋ ನಡೆಸುತ್ತಿರುವ ಐತಿಹಾಸಿಕ ಗಗನಯಾನ್ ಮಿಷನ್ ನಲ್ಲಿ ನಾಲ್ವರು ಗಗನಯಾತ್ರಿಗಳು ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ. ಇವರನ್ನು ಇಂದು ಪ್ರಧಾನಿ ಮೋದಿ ಕೇರಳದ ತಿರುವನಂತಪುರಂನಲ್ಲಿರುವ ವಿಕ್ರಮ್ ಸಾರಾಭಾಯ್ ಸ್ಪೇಸ್ ಸೆಂಟರ್ ನಲ್ಲಿ ಭೇಟಿ ಮಾಡಿ ಪರಿಚಯಿಸಿದ್ದಾರೆ. 12 ಟೆಸ್ಟ್ ಪೈಲಟ್ ಗಳ ಪೈಕಿ ಅಂತಿಮವಾಗಿ ನಾಲ್ವರು ಆಯ್ಕೆಯಾಗಿದ್ದಾರೆ. ಕ್ಯಾಪ್ಟನ್ ಪ್ರಶಾಂತ್ ನಾಯರ್, ಗ್ರೂಪ್ ಕ್ಯಾಪ್ಟನ್ ಅಂಗದ್ ಪ್ರತಾಪ್, ಗ್ರೂಪ್ ಕ್ಯಾಪ್ಟನ್ ಅಜಿತ್ ಕೃಷ್ಣನ್ ಮತ್ತು ವಿಂಗ್ ಕಮಾಂಡರ್ ಶುಭಾಂಶು ಶುಕ್ಲ ಗಗನಯಾನ ಮಿಷನ್ ಗೆ ಆಯ್ಕೆಯಾಗಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯಸಭೆ ಚುನಾವಣೆ: ಅಡ್ಡ ಮತದಾನ ಮಾಡಿದ ಬಿಜೆಪಿಯ ಎಸ್.ಟಿ. ಸೋಮಶೇಖರ್