Select Your Language

Notifications

webdunia
webdunia
webdunia
webdunia

LPG ಸಿಲಿಂಡರ್​ ದರ 25 ರೂ. ಏರಿಕೆ

LPG cylinder price is Rs.25. the rise
bangalore , ಭಾನುವಾರ, 1 ಜನವರಿ 2023 (18:46 IST)
2023 ಹೊಸ ವರ್ಷದ ಮೊದಲ ದಿನವೇ ತೈಲ ಕಂಪನಿಗಳು ವಾಣಿಜ್ಯ ಬಳಕೆಯ LPG ಸಿಲಿಂಡರ್‌ಗಳ ದರವನ್ನು 25 ರೂಪಾಯಿಗಳಷ್ಟು ಹೆಚ್ಚಿಸಿದೆ. ಹೊಸ ದರದ ಪ್ರಕಾರ 19 ಕೆಜಿಯ ವಾಣಿಜ್ಯ ಸಿಲಿಂಡರ್ ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ 1,685.5 ರೂಪಾಯಿ, ದೆಹಲಿಯಲ್ಲಿ 1,768 ರೂ., ಮುಂಬೈನಲ್ಲಿ 1,721 ರೂ. ಏರಿಕೆಯಾಗಿದೆ. ಗೃಹ ಬಳಕೆಯ ಸಿಲಿಂಡರ್‌ಗಳ ಬೆಲೆ ಯಥಾ ಸ್ಥಿತಿಯಲ್ಲಿ ಮುಂದುವರಿಯಲಿದೆ. ಸಿಲಿಂಡರ್ ದರ ಏರಿಕೆಯಿಂದ ರೆಸ್ಟೋರೆಂಟ್ ಹಾಗೂ ಹೋಟೆಲ್ ಸೇವೆಗಳ ದರ ಏರಿಕೆಯಾಗುವ ಸಾಧ್ಯತೆಯಿದೆ. ಹೊಸ ವರ್ಷದ ಮೊದಲ ದಿನವೇ ವಾಣಿಜ್ಯ ಎಲ್‌ಪಿಜಿ ದರ ಏರಿಕೆಯಾಗಿದ್ದು, ಇದು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಉಡುಗೊರೆ, ಇದು ಕೇವಲ ಆರಂಭ ಅಷ್ಟೇ’ ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಒಟ್ಟಾಗಿ ಕೆಲಸ ಮಾಡಿದರೆ ಲಾಭ ಸಿಎಂ ಬೊಮ್ಮಾಯಿ