Select Your Language

Notifications

webdunia
webdunia
webdunia
webdunia

ಶಿವಣ್ಣನ 125ನೇ ಸಿನಿಮಾ ವೇದ ರಿಲೀಸ್

ಶಿವಣ್ಣನ 125ನೇ ಸಿನಿಮಾ ವೇದ ರಿಲೀಸ್
bangalore , ಶುಕ್ರವಾರ, 23 ಡಿಸೆಂಬರ್ 2022 (19:57 IST)
ನಟ ಶಿವರಾಜ್​​ಕುಮಾರ್​​​ ನಟನೆಯ ವೇದ ಸಿನಿಮಾ ಇಂದು ರಿಲೀಸ್​​ ಆಗಿದೆ. ಇದು ಡಾ.ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರವಾಗಿದೆ. ಇದು ನಿರ್ದೇಶಕ ಹರ್ಷ ಮತ್ತು ಶಿವಣ್ಣ ಅವರ ಕಾಂಬಿನೇಷನ್​​​ನ 4ನೇ ಸಿನಿಮಾವಾಗಿದೆ. ಶಿವಣ್ಣ ಹೋಮ್ ಬ್ಯಾನರ್​​​ನಡಿ ತಯಾರಾದ ಚೊಚ್ಚಲ ಚಿತ್ರ ಇದಾಗಿದೆ. ಗೀತಾ ಪಿಕ್ಚರ್ಸ್ ಬ್ಯಾನರ್​​​ನಡಿ ಗೀತಾ ಶಿವರಾಜ್ ಕುಮಾರ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಈ ಚಿತ್ರದ ಮೂಲಕ ಹಿರಿಯ ನಟಿ ಉಮಾಶ್ರೀ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಶಿವಣ್ಣ ಜೊತೆ ಗಾನವಿ ಲಕ್ಷ್ಮಣ್, ಅದಿತಿ ಸಾಗರ್, ಚೆಲುವರಾಜ್ ನಟನೆ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆಯ ಸಾಂಗ್ಸ್ ಸೂಪರ್ ಹಿಟ್ ಆಗಿದೆ. ಒಟ್ಟು 300ಕ್ಕೂ ಅಧಿಕ ಥಿಯೇಟರ್​​​ಗಳಲ್ಲಿ ವೇದ ಗ್ರ್ಯಾಂಡ್ ರಿಲೀಸ್ ಆಗಿದೆ. ಇಂದು ಒಂದೇ ದಿನ 1200ಕ್ಕೂ ಅಧಿಕ ಶೋಗಳ ಪ್ರದರ್ಶನ ಇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

‘ವೇದ’ ಆಗಿ ಅಬ್ಬರಿಸಿದ ಶಿವಣ್ಣ: ಥಿಯೇಟರ್ ನಲ್ಲಿ ಪುನೀತ್ ಗೆ ಗೌರವ