Select Your Language

Notifications

webdunia
webdunia
webdunia
webdunia

ಅಪಘಾತ: 25 ಲಕ್ಷ ರೂ ಪರಿಹಾರ ಘೋಷಣೆ

ಅಪಘಾತ: 25 ಲಕ್ಷ ರೂ ಪರಿಹಾರ ಘೋಷಣೆ
ದೊಡ್ಡಬಳ್ಳಾಪುರ , ಮಂಗಳವಾರ, 29 ನವೆಂಬರ್ 2022 (17:31 IST)
ಬೈಕ್​ಗೆ BBMP ಕಸದ ಲಾರಿ ಡಿಕ್ಕಿ ಹೊಡೆದು ನೆಲಮಂಗಲ ಮೂಲದ ಮಹೇಶ್, ಮಾರುತಿ ಎಂಬ ಇಬ್ಬರು ಬೈಕ್ ಸವಾರರು ಮೃತಪಟ್ಟಿರುವ ಘಟನೆ ಬೆಂಗಳೂರು ಗ್ರಾ. ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಹುಲಿಕುಂಟೆ ಗ್ರಾಮದ ಬಳಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹೇಶ್ ಮತ್ತು ಮಾರುತಿ ಕುಟುಂಬಗಳಿಗೆ BBMP ತಲಾ 25 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಘಟನೆ ಖಂಡಿಸಿ ಹುಲಿಕುಂಟೆ ಗ್ರಾಮಸ್ಥರು ರಸ್ತೆ ತಡೆದು ಧರಣಿ ನಡೆಸಿದ್ದರು. ಮೃತದೇಹಗಳನ್ನ‌ ಅಪಘಾತ ಸ್ಥಳದಿಂದ ತೆರವು ಮಾಡಲು ಬಿಡದೆ ಧರಣಿ ನಡೆಸಲಾಗಿತ್ತು. ಹೀಗಾಗಿ ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ಆಗಮಿಸಿ ಎರಡೂ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದ್ದಾರೆ. ಮೃತಪಟ್ಟ ಇಬ್ಬರಿಗೂ ತಲಾ 25 ಲಕ್ಷ ಪರಿಹಾರ ಘೋಷಣೆ ಮಾಡಿ ಧರಣಿ ನಿರತರ ಮನವೊಲಿಸಿ ಧರಣಿ ಅಂತ್ಯ ಮಾಡಿಸಿದ್ದಾರೆ. ಬಳಿಕ ಮೃತ ದೇಹಗಳು ದೊಡ್ಡಬಳ್ಳಾಪುರ ಶವಾಗಾರಕ್ಕೆ‌ ರವಾನಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಾರತದೊಂದಿಗೆ ಹೊಸ ಮುಕ್ತ ವ್ಯಾಪಾರ ಒಪ್ಪಂದ