Publish Date: Wed, 26 Aug 2020 (18:07 IST)
Updated Date: Wed, 26 Aug 2020 (18:09 IST)
ಐದಾರು ವರ್ಷ ಲವ್ ಮಾಡಿ ಕೈಕೊಟ್ಟ ಹುಡುಗನಿಂದಾಗಿ ಯುವತಿ ಮಾಡಬಾರದ ಕೆಲಸ ಮಾಡಿಕೊಂಡಿದ್ದಾಳೆ.
ಅನಿಶಾ ಹಾಗೂ ಸತೀಶ್ ಶೆಟ್ಟಿ ಪರಸ್ಪರ ಪ್ರೀತಿಸುತ್ತಿದ್ದರು. ಐದಾರು ವರ್ಷಗಳ ಪ್ರೀತಿ ಮದುವೆ ಹಂತಕ್ಕೆ ಬಂದಿತ್ತು. ಆದರೆ ಪ್ರಿಯಕರ ಸತೀಶ್ ಮಾತ್ರ ಅನಿಶಾಳ ಜೊತೆಗೆ ಮದುವೆಗೆ ಬಿಲ್ ಕುಲ್ ಒಪ್ಪಲಿಲ್ಲ.
ಅನಿಶಾಳ ಜೊತೆ ಲವ್ ಮಾಡಿ ಬೇರೊಂದು ಹುಡುಗಿ ಜೊತೆಗೆ ಮದುವೆ ಮುಂದಾಗಿದ್ದನು.
ಲವರ್ ನ ನಡೆಯಿಂದ ಬೇಸತ್ತ ಯುವತಿ ಅನಿಶಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹುಡುಗಿಯ ಮನೆಯವರು ದೂರಿದ್ದಾರೆ.
ಉಡುಪಿಯ ಬ್ರಹ್ಮಾವರ ತಾಲೂಕಿನಲ್ಲಿ ಘಟನೆ ನಡೆದಿದ್ದು, ಪ್ರಿಯಕರ ಸತೀಶ್ ಶೆಟ್ಟಿ ಪರಾರಿಯಾಗಿದ್ದಾನೆ.