Publish Date: Sat, 08 Oct 2022 (20:20 IST)
Updated Date: Sat, 08 Oct 2022 (20:24 IST)
BJP ಕಾರ್ಯಕಾರಿಣಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷ ಟ್ವೀಟ್ ಮಾಡಿ ಟ್ರೋಲ್ ಮಾಡಿದೆ. BJPಯಲ್ಲಿ ಶಾಸಕರನ್ನ ಖರೀದಿಸಿ ಸಂವಿಧಾನ ವಿರೋಧಿ ಸರ್ಕಾರ ರಚನೆ ಮಾಡಲಾಗಿದೆ. CD ಬ್ಲಾಕ್‌ಮೇಲ್ ಮಾಡಿದವರಿಗೆ ಮಂತ್ರಿ ಪದವಿ ನೀಡಿದ್ದಾರೆ. ಸಚಿವ ಸ್ಥಾನಗಳು 40ರಿಂದ 50 ಕೋಟಿಗೆ ಸೇಲ್ ಆಗುತ್ತಿವೆ. ಸಿಎಂ ಹುದ್ದೆ 2,500 ಕೋಟಿಗೆ ಮಾರಾಟವಾಗಿದೆ ಎಂದು ಟ್ವೀಟ್ ಮಾಡಿ ಟ್ರೋಲ್ ಮಾಡ್ತಿದೆ. ಸರ್ಕಾರಿ ಹುದ್ದೆಗಳ ಮಾರಾಟ, ತಮ್ಮ 40% ಸರ್ಕಾರದ ಅನಾಚಾರಗಳೆಲ್ಲವನ್ನೂ ಒಪ್ಪಿದ PayCMಗೆ ಧನ್ಯವಾದ ಎಂದು ಟ್ವೀಟ್ ಮೂಲಕ ಬೊಮ್ಮಾಯಿ ಅವರನ್ನು ಕಾಲೆಳೆಯಲಾಗಿದೆ. ಇದಕ್ಕೆ BJP ಕೂಡ ತಿರುಗೇಟು ನೀಡಿದೆ. ಕಾಂಗ್ರೆಸ್ ಮತ್ತು BJP ನಡುವೆ ಟ್ವೀಟ್ ವಾರ್ ಜೋರಾಗಿದೆ. ಕಾಂಗ್ರೆಸ್ ಟ್ವೀಟ್ ಫೇಕ್ ಟ್ವೀಟ್ ಎಂದು BJP ಹೇಳಿದೆ. ರಣಹೇಡಿಗಳ ಕೊನೆಯ ಅಸ್ತ್ರ ಸಶಕ್ತ ಎದುರಾಳಿಯ ಮಾತುಗಳನ್ನು ತಿರುಚಿ, ಸತ್ಯದ ತಲೆಯ ಮೇಲೆ ಹೊಡೆಯುವ ಕೆಲಸ ಮಾಡುವುದು. ಈ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಟ್ವೀಟ್ ಮೂಲಕ ಕಾಂಗ್ರೆಸ್‌ಗೆ BJP ತಿರುಗೇಟು ನೀಡಿದೆ.