Publish Date: Mon, 30 Mar 2020 (18:30 IST)
Updated Date: Mon, 30 Mar 2020 (18:32 IST)
ಕೊರೊನಾ ವೈರಸ್ ನಿರಂತ್ರಣಕ್ಕಾಗಿ ಜಾರಿಗೊಳಿಸಿರುವ ಲಾಕ್ ಡೌನ್ ಉಲ್ಲಂಘಿಸಿದವರ ವಿರುದ್ಧ ಎಫ್ ಐ ಆರ್ ದಾಖಲು ಮಾಡಲಾಗುತ್ತಿದೆ.
ಬಳ್ಳಾರಿಯ ಹೊಸಪೇಟೆ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಲಾಕ್ ಡೌನ್ ಆದೇಶ ಉಲ್ಲಂಘಿಸಿ ಕಾಳಿಕಾದೇವಿ ರಥೋತ್ಸವ ನಡೆಸಲಾಗಿದ್ದು, ಈ ಹಿನ್ನೆಲೆಯಲ್ಲಿ 15 ಜನರ ಮೇಲೆ ಮರಿಯಮ್ಮನಹಳ್ಳಿ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಗೊಲ್ಲರಹಳ್ಳಿ ಗ್ರಾಮದ ಮುಖಂಡರಾದ ಕಾಳಪ್ಪ ಫಕ್ಕಿರಪ್ಪ, ಜಿ.ಬಿ.ನಾಗರಾಜ, ದಾಸರ ವೆಂಕಟೇಶ, ಕೋಮಾರಪ್ಪ, ಅನಂತಪ್ಪ ಡಿ.ಕೆ, ಸುರೇಶ ಮೈಲಪ್ಪ, ಕೆಂಚಪ್ಪ ಕಾಳಪ್ಪ, ಸಣ್ಣ ಹನುಮಂತಪ್ಪ, ನಾಗರಾಜ ಬನ್ನಿಯಪ್ಪ, ಈರಮ್ಮನವರ್ ಕೆಂಚಪ್ಪ, ಪುರ್ಲಿ ಕಾಳಶ್ರಪ್ಪ, ಸೋಮಪ್ಪ ಹುಚ್ಚಪ್ಪ, ಸುಣಗಾರ ದುರ್ಗೇಶ, ಗುರಿಕಾರ ಕಾಳಪ್ಪ ಮತ್ತು ಬಲವಂತಪ್ಪ ಅವರ ಮೇಲೆ ಪ್ರಕರಣ ದಾಖಲಾಗಿದೆ.
Jagadeesh
Publish Date: Mon, 30 Mar 2020 (18:30 IST)
Updated Date: Mon, 30 Mar 2020 (18:32 IST)