Select Your Language

Notifications

webdunia
webdunia
webdunia
Sunday, 13 April 2025
webdunia

ಹೋಂ ಕ್ವಾರಂಟೈನ್ ಉಲ್ಲಂಘಿಸಿ ಓಡಾಟ : ಕೇಸ್ ಹೆಚ್ಚಳ

ಕೊರೊನಾ ವೈರಸ್
ರಾಮನಗರ , ಸೋಮವಾರ, 30 ಮಾರ್ಚ್ 2020 (17:29 IST)
ಕೊರೊನಾ ವೈರಸ್ ಶಂಕೆಯಿಂದಾಗಿ ಹಲವರನ್ನು ಹೋಂ ಕ್ವಾರಂಟೈನ್ ನಲ್ಲಿರುವಂತೆ ಸರಕಾರ ಸೂಚಿಸಿದೆ. ಆದರೂ ಜನರು ಮಾತ್ರ ಕ್ಯಾರೆ ಅಂತಿಲ್ಲ.

ಹೋಂ ಕ್ವಾರಂಟೈನ್ ಉಲ್ಲಂಘನೆ ಮಾಡಿ ಹೊರಗಡೆ ಓಡಾಡುತ್ತಿರುವವರ ಪ್ರಕರಣಗಳು ಹೆಚ್ಚಾಗುತ್ತಿವೆ.

 ಚನ್ನಪಟ್ಟಣದಲ್ಲಿ  ಹೋಂ ಕ್ವಾರಂಟೈನ್ ನಲ್ಲಿ ಇರುವ ವ್ಯಕ್ತಿ ಒಬ್ಬ ಆದೇಶ ಉಲ್ಲಂಘಿಸಿ  ಹೊರಗಡೆ ಅಡ್ಡಾಡುತ್ತಿದ್ದು, ಈ ಬಗ್ಗೆ ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ IPC ಕಲಂ 188, 270, 271 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಇನ್ನು, ಲಾಕ್ ಡೌನ್ ಆದೇಶ ಉಲ್ಲಂಘನೆಗೆ ಸಂಬಂಧಿಸಿದಂತೆ ರಾಮನಗರದಲ್ಲಿ 7 ದೂರುಗಳು ದಾಖಲಾಗಿವೆ.
ರಾಮನಗರ ಟೌನ್  2, ಸಾತನೂರು 1, ಐಜೂರು ಪೊಲೀಸಾ ಠಾಣೆ 2, ರಾಮನಗರ ಗ್ರಾಮಾಂತರ 1, ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ 1 ಕೇಸ್ ದಾಖಲಾಗಿದೆ.



Share this Story:

Follow Webdunia kannada

ಮುಂದಿನ ಸುದ್ದಿ

ಮನೆ ಬಿಟ್ಟು ಹೊರಗೆ ಬಂದವರಿಗೆ ಪೊಲೀಸರಿಂದ ಪೂಜೆ