Select Your Language

Notifications

webdunia
webdunia
webdunia
webdunia

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಐದು ಕೊರೊನಾ ಪ್ರಕರಣಗಳ ವರದಿ

ಬೆಳಗಾವಿ ಜಿಲ್ಲೆಯಲ್ಲಿ ಮತ್ತೆ ಐದು ಕೊರೊನಾ ಪ್ರಕರಣಗಳ ವರದಿ
ಬೆಳಗಾವಿ , ಸೋಮವಾರ, 30 ಮಾರ್ಚ್ 2020 (18:23 IST)
ಕೋವಿಡ್-19 ಸೋಂಕಿಗೆ ಸಂಬಂಧಿಸಿದಂತೆ ಹೊಸದಾಗಿ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದ ಒಟ್ಟು ಎಂಟು ಮಾದರಿಗಳ ಪೈಕಿ ಐದು ವರದಿಗಳು ಬಂದಿವೆ.

ಬೆಳಗಾವಿ ಜಿಲ್ಲೆಯಿಂದ ಪರೀಕ್ಷೆಗೆ ಕಳಿಸಲಾಗಿದ್ದ ಮಾದರಿಗಳ ಪೈಕಿ ಐದು ವರದಿಗಳು ನೆಗೆಟಿವ್ ಬಂದಿವೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ ಸ್ಪಷ್ಟಪಡಿಸಿದ್ದಾರೆ.

ಎಂಟು ಮಾದರಿಗಳ ಪೈಕಿ ಇನ್ನು ಮೂರು ಮಾದರಿಯ ವರದಿಯನ್ನು ನಿರೀಕ್ಷಿಸಲಾಗಿದೆ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಇದುವರೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿರುವ ಒಟ್ಟಾರೆ 21 ಮಾದರಿಗಳ ಪೈಕಿ ಇದೀಗ ಒಟ್ಟಾರೆ 18 ನೆಗೆಟಿವ್ ಬಂದಿವೆ.

ಜನರು ವದಂತಿಗಳಿಗೆ ಕಿವಿಗೊಡದೇ ಸರ್ಕಾರದ ಸೂಚನೆ ಮೇರೆಗೆ ಎಲ್ಲ ರೀತಿಯ ಮುನ್ನೆಚ್ವರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಲಾಕ್ ಡೌನ್ ಮುಂದುವರಿಯುತ್ತೆ ಎಂದು ಎಚ್ಚರಿಸಿದ ಬಿ.ಎಸ್.ಯಡಿಯೂರಪ್ಪ