Select Your Language

Notifications

webdunia
webdunia
webdunia
webdunia

ರಂಜಾನ್ ತಿಂಗಳಲ್ಲೂ ಲಾಕ್ ಡೌನ್ : ಮುಸ್ಲಿಂ ಮುಖಂಡರು ಹೇಳಿದ್ದೇನು?

ರಂಜಾನ್ ತಿಂಗಳಲ್ಲೂ ಲಾಕ್ ಡೌನ್ : ಮುಸ್ಲಿಂ ಮುಖಂಡರು ಹೇಳಿದ್ದೇನು?
ಉಡುಪಿ , ಗುರುವಾರ, 16 ಏಪ್ರಿಲ್ 2020 (18:48 IST)
ಕೊರೊನಾ ವೈರಸ್ ನಿಯಂತ್ರಣಕ್ಕೆ ದೇಶಾದ್ಯಂತ ಲಾಕ್ ಡೌನ್ ಮುಂದುವರಿಸಲಾಗಿದೆ. ಏತನ್ಮಧ್ಯೆ ರಂಜಾನ್ ಆಚರಣೆ ಬಂದಿದ್ದು ಈ ಕುರಿತು ಮುಸ್ಲಿಂ ಮುಖಂಡರು ಸ್ಪಷ್ಟನೆ ನೀಡಿದ್ದಾರೆ.

ಕೊರೊನಾ ಸೋಂಕು ತಡೆ ಹಿನ್ನೆಲೆ ಇದೀಗ ಕೇಂದ್ರ ಸರ್ಕಾರ ಮೇ 3 ರ ವರೆಗೆ ಲಾಕ್‍ಡೌನ್ ವಿಸ್ತರಿಸಿದೆ. ಲಾಕ್‍ಡೌನ್ ಮುಗಿಯುವವರೆಗೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯನ್ನ ನಿಲ್ಲಿಸಲು ಸರ್ಕಾರ ಸೂಚಿಸಿದೆ. ಈ ನಡುವೆ ರಂಜಾನ್  ತಿಂಗಳಲ್ಲೂ ಲಾಕ್‍ಡೌನ್ ನಿಯಮಗಳನ್ನ ಕಡ್ಡಾಯವಾಗಿ ಪಾಲನೆ ಮಾಡುವಂತೆ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಯಾಸೀನ್ ಮಲ್ಪೆ ತಿಳಿಸಿದ್ದಾರೆ.

ಮಸೀದಿಗೆ ತೆರಳದೆ ಮನೆಯಲ್ಲೇ ನಮಾಜ್ ಮಾಡಬೇಕು. ಸಹರಿ ಹಾಗೂ ಇಫ್ತಾರ್ ಕೂಟವನ್ನ ನಿರ್ಬಂಧಿಸಬೇಕು. ಈ ಮಾಸದಲ್ಲಿ ಬಡವರಿಗೆ ಸಹಾಯ ಮಾಡಬೇಕು. ದಿನನಿತ್ಯದ ಅಗತ್ಯ ವಸ್ತುಗಳಿಗೆ ಖರೀದಿ ವಿಚಾರದಲ್ಲಿ ಸರಕಾರ ನೀಡುವ ನಿರ್ದೇಶನ ತಪ್ಪದೇ ಪಾಲಿಸಬೇಕು. ಸಮುದಾಯದ ಮುಖಂಡರು ಸರಕಾರದ ಸೂಚನೆಯನ್ನ ಕಡ್ಡಾಯವಾಗಿ ಪಾಲಿಸಿ ಕೊರೊನಾ ನಿಯಂತ್ರಣಕ್ಕೆ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡಬೇಕು ಎಂದು ತಿಳಿಸಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಮುಲ್ಲಾಗಳ ವಿರುದ್ಧ ವಿವಾದಾತ್ಮಕ ಟ್ವಿಟ್ ಮಾಡಿದ ಕಂಗನಾ ರಣಾವತ್ ಸಹೋದರಿ ರಂಗೋಲಿ