Select Your Language

Notifications

webdunia
webdunia
webdunia
webdunia

ಬಾಂಬೆ ರೆಡ್ ಲೈಟ್ ಏರಿಯಾದಂತೆ ಬೆಂಗಳೂರಿನ ವೇಶ್ಯಾವಾಟಿಕೆಯ ಕರಾಳ ದಂಧೆ ಬಯಲು

Like the Bombay red light area
bangalore , ಗುರುವಾರ, 17 ನವೆಂಬರ್ 2022 (17:29 IST)
ನೀವು ಬಾಂಬೆ ರೆಡ್ ಲೈಟ್ ಏರಿಯಾ ಬಗ್ಗೆ ಕೇಳಿದ್ದೀರಾ.ಬೆಂಗಳೂರು ವೇಶ್ಯಾವಾಟಿಕೆ ದಂಧೆಯ ಕರಾಳ ಮುಖ ಅನಾವರಣವಾಗಿದೆ.ಬ‍ಾಂಬೆ ರೆಡ್ ಲೈಟ್ ಏರಿಯಾದಂತೆ ಬೆಂಗಳೂರಲ್ಲಿ ಕರಾಳ ದಂಧೆ ನಡೆಯುತ್ತಿದೆ.ಬೆಂಗಳೂರಿನ ಹೋಟೆಲ್ ಗಳಲ್ಲೂ ಸೀಕ್ರೇಟ್ ರೂಮ್ ಇದೆ.ಪೊಲೀಸ್ ರೈಡ್ ಮಾಡುದ್ರು ಗೊತ್ತಾಗಲ್ಲ ಸಿಕ್ರೇಟ್ ರೂಮ್ ರಹಸ್ಯ.ಬೆಂಗಳೂರು ಸಿಸಿಬಿ ದಾಳಿ ವೇಳೆ ಸಿಕ್ರೇಟ್ ರೂಮ್ ರಹಸ್ಯ ಬಟಬಯಲಾಗಿದೆ.
 
ಬೃಹತ್ ವೇಶ್ಯಾವಾಟಿಕೆ ದಂಧೆಯನ್ನ ಸಿಸಿಬಿ ಪೊಲೀಸರು ಭೇಧಿಸಿದಾರೆ.ಕಳೆದ 7ನೇ  ತಾರೀಖು ಬೆಂಗಳೂರಿನ ಹಲವು ಹೋಟೆಲ್ ಮೇಲೆ ಸಿಸಿಬಿ ರೈಡ್ ಮಾಡಿತ್ತು.ಈ ವೇಳೆ ಸೀಕ್ರೇಟ್ ರೂಮಲ್ಲಿನಟ್ಟು ಯಾರಿಗೂ ಗೊತ್ತಾಗದಂತೆ  ಆರೋಪಿಗಳು ದಂಧೆ ನಡೆಸುತ್ತಿದ್ದರು.ಕಳೆದ 7 ತಾರೀಖು ಕಾಟನ್ ಪೇಟೆ ದುರ್ಗಾ ಪ್ಯಾಲೆಸ್ ಲಾಡ್ಜ್ ಮೇಲೆ ಸಿಸಿಬಿ ರೈಡ್ ಮಾಡಿತ್ತು.ಈ ವೇಳೆ ಗೊಡೆಯೊಳಗೆ ಸೀಕ್ರೇಟ್ ರೂಮ್ ಮಾಡಿದ್ದು ಬಯಲಿಗೆ ಬಂದಿದೆ.ಅಮಾಯಕ ಹೆಣ್ಣು ಮಕ್ಕಳನ್ನ ಕರೆತಂದು ವೇಶ್ಯಾವಾಟಿಕೆ ದಂಧೆಗೆ ಆರೋಪಿಗಳು ದೂಡಿದ್ದು .ಮಾನವ ಕಳ್ಳಸಾಗಣೆ ಮೂಲಕ ಹೆಣ್ಣುಮಕ್ಕಳನ್ನ ಕರೆತಂದು ದಂಧೆ ನಡೆಸಿದ್ದಾರೆ.
 
ಬೆಂಗಳೂರಿನ ಕಾಟನ್ ಪೇಟೆಯಲ್ಲಿರುವ ದುರ್ಗಾ ಪ್ಯಾಲೆಸ್ ಲಾಡ್ಜ್ ನಲ್ಲಿ ಉಸಿರಾಡೋದಕ್ಕೂ ಸಾಧ್ಯವಾಗದ ರೂಮ್ ನಲ್ಲಿ ಆರೋಪಿಗಳು ದಂಧೆ ನಡೆಸುತ್ತಿದ್ದರು.ಬೆಂಗಳೂರಿನ ಮೂರು ಲಾಡ್ಜ್ ಗಳ ಮೇಲೆ ಸಿಸಿಬಿ ರೈಡ್ ಮಾಡಿದ್ದು,ಸಿಟಿ ಮಾರ್ಕೇಟ್ ನ ವಾಸವಿ ಲಾಡ್ಜ್  , ಕಲಾಸಿಪಾಳ್ಯದ ಹೋಟೆಲ್ ಸಫೀರ್ ಬೋರ್ಡಿಂಗ್ ಅಂಡ್ ಲಾಡ್ಜ್  ಹಾಗೂ ಕಾಟನ್ ಪೇಟೆಯ ದುರ್ಗಾ ಪ್ಯಾಲೆಸ್ ಲಾಡ್ಜ್  ಈ ಮೂರು ಲಾಡ್ಜ್ ಮೇಲೆ ಸಿಸಿಬಿ ಪೊಲೀಸರು ರೈಡ್ ಮಾಡಿದರು.ಈ ವೇಳೆ ದುರ್ಗಾ ಪ್ಯಾಲೇಸ್ ಲಾಡ್ಜ್ ನಲ್ಲಿ ಸಿಕ್ರೇಟ್ ರೂಮ್ ಪತ್ತೆಯಾಗಿದೆ.ಸೀಕ್ರೆಟ್ ರೂಮ್ ನಲ್ಲಿ ಇಬ್ಬರು ಮಹಿಳೆಯರಿನ್ನಿಟ್ಟು ಆರೋಪಿಗಳು ದಂಧೆ ನಡೆಸುತ್ತಿದ್ದಾರೆ.
 
ಬಾಂಬೆ ರೆಡ್ ಏರಿಯಾ ಮಾದರಿಯಲ್ಲೇ ಸೀಕ್ರೇಟ್ ರೂಮ್ ನಿರ್ಮಿಸಿ ದಂಧೆ ಎಸೆಗುತ್ತಿದ್ದು,ಸಣ್ಣ ಪೆಟ್ಟಿಗೆ ಮಾದರಿಯಲ್ಲಿ ಸೀಕ್ರೇಟ್ ರೂಮ್ ನಿರ್ಮಾಣ ಮಾಡಲಾಗಿದೆ.ಪೊಲೀಸರು ರೈಡ್ ಮಾಡೋಕೆ ಬಂದಾಗ ಸೀಕ್ರೇಟ್ ರೂಮ್ ನಲ್ಲಿ ಮಹಿಳೆಯರನ್ನ  ಆರೋಪಿಗಳು ಕೂಡಿ ಹಾಕಿದರು.ಯಾರೂ ಇಲ್ಲ ಅಂತ ಪೊಲೀಸ್ರು ವಾಪಸ್ ಹೋದ್ರೆ ಮತ್ತೆ ದಂಧೆ ಶುರುವಾಗಿದೆ.ಸದ್ಯ ಮಹಿಳೆಯರನ್ನ ರಕ್ಷಿಸಿ  ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಒಟ್ಥು 6 ಆರೋಪಿಗಳನ್ನ ಬಂಧಿಸಿ 7 ಮಹಿಳೆಯರನ್ನ ಪೊಲೀಸರು ರಕ್ಷಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನವರು ನನಗೆ ಮಸಿ ಬಳಿಯೋ ಕೆಲಸ ಮಾಡ್ತಿದ್ದಾರೆ ಎಂದು ಅಶ್ವಥ್ ನಾರಾಯಣ ಆರೋಪ