Select Your Language

Notifications

webdunia
webdunia
webdunia
webdunia

ಪತ್ನಿಯಿಂದ ಜೀವ ಬೆದರಿಕೆ; ದೂರು ದಾಖಲಿಸಿದ ಖ್ಯಾತ ವೈದ್ಯ ಹಾಗೂ ರಾಜಕಾರಣಿ ಕ್ರಾಂತಿಕಿರಣ್

ಪತ್ನಿಯಿಂದ ಜೀವ ಬೆದರಿಕೆ; ದೂರು ದಾಖಲಿಸಿದ ಖ್ಯಾತ ವೈದ್ಯ ಹಾಗೂ ರಾಜಕಾರಣಿ ಕ್ರಾಂತಿಕಿರಣ್
ಹುಬ್ಬಳ್ಳಿ , ಬುಧವಾರ, 3 ಅಕ್ಟೋಬರ್ 2018 (08:38 IST)
ಹುಬ್ಬಳ್ಳಿ : ಖ್ಯಾತ ವೈದ್ಯ ಹಾಗೂ ರಾಜಕಾರಣಿಯೊಬ್ಬರು ಪತ್ನಿಯಿಂದ ಜೀವ ಬೆದರಿಕೆ ಇದೆ ಎಂದು ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.


ಡಾ.ಕ್ರಾಂತಿಕಿರಣ್ ಎಂಬುವವರು ಪತ್ನಿಯ ವಿರುದ್ಧ ದೂರು ನೀಡಿದವರು. ಇವರು ಹುಬ್ಬಳ್ಳಿಯಲ್ಲಿ ಖ್ಯಾತ ನ್ಯೂರೋಲಜಿಸ್ಟ್ ಆಗಿದ್ದರು. ಡಾ.ಕ್ರಾಂತಿಕಿರಣ್  ಹಾಗೂ ಇವರ ಪತ್ನಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಕ್ರಾಂತಿಕಿರಣ್​ ಅವರ ಪತ್ನಿ ಕೂಡಾ ಹುಬ್ಬಳ್ಳಿಯ ಖ್ಯಾತ ವೈದ್ಯೆಯಾಗಿದ್ದು, ಇಬ್ಬರು ಸೇರಿ ಹುಬ್ಬಳ್ಳಿಯಲ್ಲಿ ದೊಡ್ಡ ಖಾಸಗಿ ಆಸ್ಪತ್ರೆಯನ್ನು ಸಹ ಕಟ್ಟಿದ್ದರು.
ಆದರೆ ಇದೀಗ ಕ್ರಾಂತಿಕಿರಣ್​ ಅವರ ಪತ್ನಿ ಇನ್ನೊಬ್ಬನ ಜತೆ ಸಂಬಂಧ ಇಟ್ಟುಕೊಂಡಿದ್ದು, ಅದನ್ನ ಕೇಳಲು ಹೋದ್ರೆ ತನ್ನ ಪ್ರಿಯಕರನ ಜೊತೆಗೂಡಿ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾಳೆ.


ಆದಕಾರಣ ಕ್ರಾಂತಿಕಿರಣ್​ ಅವರು ವಿದ್ಯಾನಗರ ಠಾಣೆಯಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ವಿರುದ್ಧ ದೂರು ನೀಡಿದ್ದಾರೆ. ಐಪಿಸಿ ಸೆ.506, 504, 323 ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಡಾ.ಕ್ರಾಂತಿಕಿರಣ್​ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು ಎನ್ನಲಾಗ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್; ಸೈಬರ್ ಠಾಣೆಗೆ ದೂರು ನೀಡಿದ ಸತ್ಯಮೂರ್ತಿ