Select Your Language

Notifications

webdunia
webdunia
webdunia
webdunia

ಸಂತ್ರಸ್ತ ಬಾಲಕಿಯರಿಂದ ಮೋದಿಗೆ ಪತ್ರ

ಸಂತ್ರಸ್ತ ಬಾಲಕಿಯರಿಂದ ಮೋದಿಗೆ ಪತ್ರ
bangalore , ಶನಿವಾರ, 12 ನವೆಂಬರ್ 2022 (17:52 IST)
ಮುರುಘಾ ಮಠದ ಶಿವಮೂರ್ತಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ದಿನದಿಂದ ದಿನಕ್ಕೆ ಟ್ವಿಸ್ಟ್​ ಮೇಲೆ ಟ್ವಿಸ್ಟ್​​ ಸಿಗ್ತಿದೆ. ಸಂತ್ರಸ್ತ ಬಾಲಕಿಯರು ಮಠದಲ್ಲಿನ ಕಿರುಕುಳದ ಬಗ್ಗೆ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಮಠದ ಅಡುಗೆ ಸಹಾಯಕಿಯರ ಮಕ್ಕಳು ಮೋದಿಗೆ ಪತ್ರ ಬರೆದಿದ್ದಾರೆ. ಕಿರುಕುಳದ ಬಗ್ಗೆ ಲೆಟರ್‌ನಲ್ಲಿ ಎಳೆಎಳೆಯಾಗಿ ಉಲ್ಲೇಖಿಸಲಾಗಿದೆ. ಶಿವಮೂರ್ತಿ ನಮ್ಮ ಜೊತೆ ಕೆಟ್ಟದಾಗಿ ನಡೆದುಕೊಳ್ತಿದ್ರು. ಈ ಬಗ್ಗೆ ನಮ್ಮ ಅಮ್ಮನಿಗೆ ವಿಷಯ ತಿಳಿಸಿದ್ವಿ. ನನ್ನ ಮಕ್ಕಳನ್ನು ಕಳಿಸಬೇಡ ಎಂದು ರಶ್ಮಿಗೆ ನಮ್ಮ ಅಮ್ಮ ಹೇಳಿದ್ರು. ವಾರ್ಡನ್​ ರಶ್ಮಿ ನಮ್ಮನ್ನ ಸ್ವಾಮಿ ಬಳಿ ಕರೆದೊಯ್ದರು. ನಾನು, ನನ್ನ ಅಕ್ಕ ಇಬ್ಬರು ಶಿವಮೂರ್ತಿ ಬಳಿ ಹೋಗಿದ್ವಿ. ನೀನು ಎಷ್ಟನೇ ತರಗತಿ ಓದುತ್ತಿದ್ದೀಯ ಎಂದು ನನ್ನನ್ನು ಕೇಳಿದ್ದರು. ಆಗ ನನಗೆ ಶಿವಮೂರ್ತಿ ತಿನ್ನಲು ಚಾಕೋಲೇಟ್‌ ಕೊಟ್ರು. ಆವಾಗ ನಾನು ಮಠದಲ್ಲೇ ಮಲಗಿ ಬಿಟ್ಟೆ. ಮತ್ತೊಮ್ಮೆ ನನ್ನನ್ನು ಶಿವಮೂರ್ತಿ ಬಳಿ ಕರೆದೊಯ್ದರು. ಶಿವಮೂರ್ತಿ ನನ್ನನ್ನು ತೊಡೆಯ ಮೇಲೆ ಕೂರಿಸಿಕೊಂಡ್ರು. ನನ್ನ ಎದೆಯ ಭಾಗವನ್ನು ಮುಟ್ಟಿದರು. ಐದಾರು ಸಾರಿ ನನ್ನನ್ನು ಸ್ವಾಮಿ ಬಳಿ ಕಳಿಸಿದ್ದರು. ಇದರಿಂದ ಗಾಬರಿಗೊಂಡು ನಾನು ಅಲ್ಲಿಂದ ಎದ್ದು ಬಂದೆ. ಅಮ್ಮನಿಗೆ ಈ ವಿಚಾರ ಹೇಳಿದೆ ಎಂದು ಮಕ್ಕಳು ಮೋದಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮತದಾರರಿಗೆ ಮೋದಿ ಕಿವಿಮಾತು