Publish Date: Sat, 12 Nov 2022 (17:30 IST)
Updated Date: Sat, 12 Nov 2022 (17:32 IST)
ಚಿತ್ತಾಪುರದಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ಮುಖಂಡರ ನಡುವೆ ಮಾತಿನ ಜಗಳ ದಿನಕ್ಕೊಂದು ರೂಪ ಪಡೆಯುತ್ತ ಉಲ್ಬಣಗೊಳ್ಳುತ್ತಿದೆ. ಶನಿವಾರ ಕಲಬುರಗಿಯಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ಯುವ BJP ನಾಯಕ ಮಣಿಕಂಠ ರಾಠೋಡ್, BJP ನಾಯಕರು ತಮ್ಮನ್ನು ಕ್ಷೇತ್ರದಲ್ಲಿ ತಿರುಗಾಡಲು ಬಿಡುತ್ತಿಲ್ಲ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಅವರು ಹೇಳಿರುವುದು ನಿಜ ಅನ್ನೋದಾದರೆ, ಅವರು ತನ್ನ ಮೇಲೆ ಗುಂಡು ಹಾರಿಸಲಿ, ಗುಂಡೇಟು ತಿನ್ನಲು ಸಿದ್ಧನಿದ್ದೇನೆ ಅಂತ ಹೇಳಿದರು. ಪ್ರಿಯಾಂಕ್ ಖರ್ಗೆ ಭಾರತ್ ಜೋಡೊ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮೊದಲು ಚಿತ್ತಾಪುರ ಮತಕ್ಷೇತ್ರದ ಯಾತ್ರೆ ಮಾಡಲಿ ಎಂದು ರಾಠೋಡ್ ಹೇಳಿದರು.
geetha
Publish Date: Sat, 12 Nov 2022 (17:30 IST)
Updated Date: Sat, 12 Nov 2022 (17:32 IST)