Select Your Language

Notifications

webdunia
webdunia
webdunia
webdunia

ಕಾರ್ಯಕರ್ತರನ್ನು ಕೆಣಕಿದ್ರೆ ಸುಮ್ಮನಿರಲ್ಲ- ಪ್ರಿಯಾಂಕ್ ಖರ್ಗೆ

It is not easy to insult activists
ಕಲಬುರಗಿ , ಶನಿವಾರ, 12 ನವೆಂಬರ್ 2022 (17:39 IST)
ಕಾಂಗ್ರೆಸ್ ಕಾರ್ಯಕರ್ತರನ್ನು ಕೆಣಕಿದ್ರೆ ಸುಮ್ಮನಿರಲ್ಲ. ನಾವು ಮನಸ್ಸು ಮಾಡಿದ್ರೆ ಒಬ್ಬನೇ ಒಬ್ಬ BJP ಮುಖಂಡನನ್ನು ಓಡಾಡಲು ಬಿಡುವುದಿಲ್ಲ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಪ್ರಚೋದನಾತ್ಮಕ ಹೇಳಿಕೆ ನೀಡಿದ್ದಾರೆ. ಪ್ರಿಯಾಂಕ್​​ ಖರ್ಗೆ ಕಾಣೆಯಾಗಿದ್ದಾರೆ ಎಂದು BJP ಕಾರ್ಯಕರ್ತರು ಕಲಬುರಗಿಯಾದ್ಯಂತ ಪೋಸ್ಟರ್​ ಅಂಟಿಸಿದ್ರು. ಈ ವಿಚಾರವಾಗಿ ಕೋಪಗೊಂಡಿದ್ದ ಪ್ರಿಯಾಂಕ್​​ ಖರ್ಗೆ ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ. ವಾಡಿ ಪಟ್ಟಣದಲ್ಲಿ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಉದ್ಘಾಟನೆ ಮಾಡಿ ಮಾತನಾಡಿದ ಅವರು, ಚಿತ್ತಾಪುರ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರನ್ನು ವಿನಾಕಾರಣ ಬಿಜೆಪಿಗರು ಕೆಣಕಿದ್ರೆ ನಾನು ಸುಮ್ಮನಿರುವುದಿಲ್ಲ. ನನ್ನ ಮರ್ಯಾದೆ ಚೌಕಟ್ಟು ದಾಟಿ ಪಾಠ ಕಲಿಸುವೆ ಎಂದು ವಾರ್ನಿಂಗ್ ನೀಡಿದ್ದಾರೆ. ನಮ್ಮ ಕುಟುಂಬದ ಮೇಲೆ ವೈಯಕ್ತಿಕ ದಾಳಿ ಮಾಡಲಾಗುತ್ತಿದೆ. ಖರ್ಗೆ ಸಾಹೇಬರಿಗೆ ಆರು ಸಲ ಹಾಗೂ ನನಗೆ 3 ಸಲ ಜೀವ ಬೆದರಿಕೆ ಕರೆ ಬಂದಿದ್ದವು. ಆದರೂ ನಾವು ಸುಮ್ಮನಿದ್ದೆವು. ಇದೀಗ ನಮ್ಮ ಕಾರ್ಯಕರ್ತರ ಮೇಲೆ ದಾಳಿ ನಡೆದಾಗ ಸುಮ್ಮನಿರಲ್ಲ ಎಂದು ಖರ್ಗೆ ಸಿಡಿದೆದ್ದಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿಗೆ ಅಧಿಕಾರದ ಮದ ನೆತ್ತಿಗೆ ಹತ್ತಿದೆ-ಸಿಎಂ ಇಬ್ರಾಹಿಂ