Select Your Language

Notifications

webdunia
webdunia
webdunia
webdunia

ಮೂರುಸಾವಿರ ಮಠಕ್ಕೆ ದಿಂಗಾಲೇಶ್ವರ ಶ್ರೀ ಉತ್ತರಾಧಿಕಾರಿಯಾಗಲಿ ಎಂದ ಶ್ರೀಶೈಲ ಶ್ರೀ

ಮೂರುಸಾವಿರ ಮಠಕ್ಕೆ ದಿಂಗಾಲೇಶ್ವರ ಶ್ರೀ ಉತ್ತರಾಧಿಕಾರಿಯಾಗಲಿ ಎಂದ ಶ್ರೀಶೈಲ ಶ್ರೀ
ಕಲಬುರಗಿ , ಮಂಗಳವಾರ, 25 ಫೆಬ್ರವರಿ 2020 (12:05 IST)
ಹುಬ್ಬಳ್ಳಿಯಲ್ಲಿರುವ ಪ್ರಖ್ಯಾತ ಮೂರು ಸಾವಿರ ಮಠಕ್ಕೆ ಜ್ಞಾನಿಯಾಗಿರೋ ದಿಂಗಾಲೇಶ್ವರ ಸ್ವಾಮೀಜಿ ಅವರನ್ನೇ ಉತ್ತರಾಧಿಕಾರಿಯನ್ನಾಗಿ ನೇಮಕ ಮಾಡಬೇಕು.

ಹೀಗಂತ ಶ್ರೀಶೈಲ ಜಗದ್ಗುರು ಶ್ರೀ ಡಾ. ಸಾರಂಗಧರ ದೇಶೀಕೇಂದ್ರ ಮಹಾಸ್ವಾಮೀಜಿ ಸಲಹೆ ನೀಡಿದ್ದಾರೆ.

ಮೂರು ಸಾವಿರ ಮಠದ ಉತ್ತರಾಧಿಕಾರಿ ವಿಷಯದಲ್ಲಿ ಗೊಂದಲ ಮೂಡಿಸಬಾರದು. ದಿಂಗಾಲೇಶ್ವರ ಸ್ವಾಮೀಜಿ ಅಭಿವೃದ್ಧಿ ಪರ ಹಾಗೂ ಕ್ರಾಂತಿಕಾರಿಯಾಗಿದ್ದಾರೆ. ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡೋದ್ರಿಂದ ಮಠ ಮತ್ತಷ್ಟು ಅಭಿವೃದ್ಧಿ ಹೊಂದುತ್ತೆ ಅಂತ ಹೇಳಿದ್ದಾರೆ.

ಪ್ರಮುಖ ಸ್ವಾಮೀಜಿಗಳು, ಭಕ್ತರು, ಮಠಗಳನ್ನು ವಿವಾದಕ್ಕೆ ಎಳೆಯದೇ ಉತ್ತರಾಧಿಕಾರಿ ವಿಷಯವನ್ನು ಪೂರ್ಣಗೊಳಿಸಬೇಕೆಂದು ಹೇಳಿದ್ದಾರೆ.



Share this Story:

Follow Webdunia kannada

ಮುಂದಿನ ಸುದ್ದಿ

ಡೊನಾಲ್ಡ್ ಟ್ರಂಪ್-ಮೋದಿ ನಡುವೆ ಇಂದು ನಡೆಯಲಿದೆ ಮಹತ್ವದ ಡೀಲ್