Select Your Language

Notifications

webdunia
webdunia
webdunia
webdunia

ಡೊನಾಲ್ಡ್ ಟ್ರಂಪ್-ಮೋದಿ ನಡುವೆ ಇಂದು ನಡೆಯಲಿದೆ ಮಹತ್ವದ ಡೀಲ್

ಡೊನಾಲ್ಡ್ ಟ್ರಂಪ್-ಮೋದಿ ನಡುವೆ ಇಂದು ನಡೆಯಲಿದೆ ಮಹತ್ವದ ಡೀಲ್
ನವದೆಹಲಿ , ಮಂಗಳವಾರ, 25 ಫೆಬ್ರವರಿ 2020 (09:52 IST)
ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಪ್ರಧಾನಿ ಮೋದಿ ಇಂದು ಮಹತ್ವದ ಮಾತುಕತೆ ನಡೆಸಲಿದ್ದು ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ.


ವ್ಯಾಪಾರ ಮತ್ತು ವಾಣಿಜ್ಯ ಮಾತುಕತೆಗಳು, ಎಚ್ 1 ಬಿ ವೀಸಾ, ಭಯೋತ್ಪಾದನೆ, ರಕ್ಷಣಾ ಒಪ್ಪಂದಗಳು ಇಂದಿನ ಮಾತುಕತೆಯ ಪ್ರಮುಖ ಅಂಶಗಳಾಗಿರಲಿವೆ.

ಅದಕ್ಕೂ ಮೊದಲು ಇಂದು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡಲಿರುವ ಟ್ರಂಪ್ ಬಳಿಕ ರಾಷ್ಟ್ರಪಿತ ಮಹಾತ್ಮಾ ಗಾಂಧಿಜೀ ಸಮಾಧಿ ಸ್ಥಳಕ್ಕೆ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ. ಇದಾದ ಬಳಿಕ ಹೈದರಾಬಾದ್ ಹೌಸ್ ನಲ್ಲಿ ಟ್ರಂಪ್-ಮೋದಿ ನಡುವೆ ಮಹತ್ವದ ಮಾತುಕತೆ, ಒಪ್ಪಂದಗಳು ನಡೆಯಲಿವೆ. ಇಂದು ಮಧ್ಯಾಹ್ನ ಟ್ರಂಪ್ ಗಾಗಿ ಪ್ರಧಾನಿ ಮೋದಿ ವಿಶೇಷ ಔತಣ ಕೂಟವನ್ನೂ ಆಯೋಜಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾಲ್ಕು ವರ್ಷದ ಬಾಲಕನನ್ನು ಹತ್ಯೆ ಮಾಡಿದ ತಾಯಿಯ ಪ್ರಿಯಕರ