Select Your Language

Notifications

webdunia
webdunia
webdunia
Friday, 28 February 2025
webdunia

ರಸ್ತೆಗುಂಡಿ ಬಗ್ಗೆ ಅಧಿಕಾರಿಗಳ ಮೇಲೆ ಎಫ್ ಐ ಆರ್ ಹಾಕಲಿ- ತುಷಾರ್ ಗಿರಿನಾಥ್

ರಸ್ತೆಗುಂಡಿ ಬಗ್ಗೆ ಅಧಿಕಾರಿಗಳ ಮೇಲೆ ಎಫ್ ಐ ಆರ್ ಹಾಕಲಿ- ತುಷಾರ್ ಗಿರಿನಾಥ್
bangalore , ಶುಕ್ರವಾರ, 16 ಡಿಸೆಂಬರ್ 2022 (15:22 IST)
ರಸ್ತೆ ಗುಂಡಿ ವಿಚಾರವಾಗಿ ಹೈಕೋರ್ಟ್ ಗೆ ಎಲ್ಲಾ ವರದಿ ನೀಡಲಾಗಿದೆ.ಹೈಕೋರ್ಟ್ ಆದೇಶಕ್ಕೆ ನಮ್ಮಿಂದ ತಕರಾರಿಲ್ಲ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
 
ರಸ್ತೆಗುಂಡಿ ಬಗ್ಗೆ ಅಧಿಕಾರಿಗಳ ಮೇಲೆ ಎಫ್ ಐ ಆರ್ ಹಾಕಲಿ.ಮಳೆ ಬಂದಾಗ ರಸ್ತೆಗುಂಡಿ ಉಂಟಾಗೋದು ಸಹಜ.ರಸ್ತೆಗಳ ಗುಣಮಟ್ಟ ಪರಿಶೀಲನೆ ಮಾಡಲಾಗ್ತಿದೆ.ನಾವು ಹಲವು ಗುಂಡಿಗಳನ್ನ ಮುಚ್ಚಿದ್ದೇವೆ.ರಸ್ತೆಗುಂಡಿ ಮುಚ್ಚಿದ ಬಳಿಕ ಪಕ್ಕದಲ್ಲೇ ಗುಂಡಿ ಬೀಳುತ್ತಿದೆ.ದಕ್ಷಿಣ ವಲಯದಲ್ಲಿ ರಸ್ತೆಗುಂಡಿ ಮುಚ್ಚುವ ಕೆಲಸವಾಗಿದೆ.ಪ್ರತಿವರ್ಷ ರಸ್ತೆಗುಂಡಿಗೆ ಹೆಚ್ಚು ಖರ್ಚಾಗುತ್ತಿತ್ತು.ಈಗ ವೈಜ್ಞಾನಿಕವಾಗಿ ರಸ್ತೆಗುಂಡಿ ಮುಚ್ಚಲಾಗ್ತಿದೆ.ವೈಜ್ಞಾನಿಕವಾಗಿ ಕೆಲಸ ಮಾಡ್ತಿರೋದರಿಂದ ಖರ್ಚು ಕಡಿಮೆಯಾಗ್ತಿದೆ ಎಂದು ತುಷಾರ್ ಗಿರಿನಾಥ್ ಹೇಳಿದ್ರು.

Share this Story:

Follow Webdunia kannada

ಮುಂದಿನ ಸುದ್ದಿ

ಸಿಟಿ ರವಿ ರಾಜ್ಯದ ದೊಡ್ಡ ಮಾಸ್ಟರ್ ಮೈಂಡ್ ಉಗ್ರ