Select Your Language

Notifications

webdunia
webdunia
webdunia
webdunia

ತುಷಾರ್ ಗಿರಿನಾಥ್ ಅಮಾನತಿಗೆ ರಮೇಶ್ ಬಾಬು ಆಗ್ರಹ

ತುಷಾರ್ ಗಿರಿನಾಥ್ ಅಮಾನತಿಗೆ ರಮೇಶ್ ಬಾಬು ಆಗ್ರಹ
bangalore , ಗುರುವಾರ, 24 ನವೆಂಬರ್ 2022 (18:22 IST)
ಚಿಲುಮೆ ಸಂಸ್ಥೆಯಿಂದ ಮತಪಟ್ಟಿ ಅಕ್ರಮ ಪ್ರಕರಣ ವಿಚಾರಕ್ಕೆ ಬಿಬಿಎಂಪಿ ಆಯುಕ್ತರಾದ ತುಷಾರ್ ಗಿರಿನಾಥ್ ಅವರನ್ನು  ಅಮಾನತು ಮಾಡಬೇಕು ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ಮಾಜಿ ಎಂಎಲ್ಸಿ ರಮೇಶ್ ಬಾಬು ಪತ್ರ ಬರೆದಿದ್ದಾರೆ. ಈ ಕುರಿತು ಮಾತನಾಡಿ ಸೆಕ್ಷನ್ 32 ಆರ್ ಪಿ ಆಕ್ಟ್ 1950 ಅಡಿಯಲ್ಲಿ ಚುನಾವಣಾ ಅಧಿಕಾರಿ ಅಕ್ರಮ ಗಳಲ್ಲಿ‌  ಶಾಮೀಲಾದರೆ ಅವರ ವಿರುದ್ಧ ಕ್ರಮಕ್ಕೆ ಅವಕಾಶ ಇದೆ. ತುಷಾರ್ ಗಿರಿನಾಥ್ ಅವರು ಮುಖ್ಯ ಮಂತ್ರಿ ಗಳ ನಿರ್ದೇಶನ ಮೇರೆಗೆ ಮತದಾರರ ದತ್ತಾಂಶ ಅಕ್ರಮ ಸಂಗ್ರಹ ಪ್ರಕರಣದಲ್ಲಿ ಭಾಗಿ ಆಗಿದ್ದಾರೆ ಆದ್ದರಿಂದ ಅವರನ್ನು  ಚುನಾವಣಾ ಕಾರ್ಯ ನಿರ್ವಹಣೆ  ಹುದ್ದೆಯಿಂದ ಬಿಡುಗಡೆ ಮಾಡಬೇಕು. ರಾಜ್ಯ ಸರ್ಕಾರಕ್ಕೆ ಐಎಎಸ್ ಅಧಿಕಾರಿ ಅಮಾನತು ಮಾಡಲು ಶಿಫಾರಸ್ಸು ಮಾಡಬೇಕು.ಈ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಮುಂದಿನವಾರ ಸರ್ವಪಕ್ಷ ಸಭೆ ಸಿಎಂ ಬೊಮ್ಮಾಯಿ