Select Your Language

Notifications

webdunia
webdunia
webdunia
webdunia

ತಪ್ಪು ಅಧಿಕಾರಿಗಳಿಂದ ಆಗಿದ್ರೆ ಅವರ ಮೇಲೆ ಕ್ರಮ ಖಂಡಿತ- ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ತಪ್ಪು ಅಧಿಕಾರಿಗಳಿಂದ ಆಗಿದ್ರೆ ಅವರ ಮೇಲೆ ಕ್ರಮ ಖಂಡಿತ- ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
bangalore , ಶುಕ್ರವಾರ, 18 ನವೆಂಬರ್ 2022 (19:21 IST)
2018 ನೇ ಇಸವಿಯಿಂದ ಮತದಾರರ ಪಟ್ಟಿ ಪರಿಷ್ಕರಣೆ ಹಾಗೂ ಜಾಗೃತಿ ಬೇರೆ ಬೇರೆ ವಿಚಾರಗಳಿಗೆ ಚಿಲುಮೆ ಸಂಸ್ಥೆಗೆ ನೀಡುತ್ತಾ ಬಂದಿದ್ದೆವೆ.ಕೆಲವು ಕಾರ್ಯಚಾರಣೆಯಲ್ಲಿ ಹಣವನ್ನು ಸಹ ನೀಡಿದ್ದೆವೆ.ಜಾಗೃತಿ ಕಾರ್ಯಕ್ರಮಗಳಲ್ಲಿ ಅವರು ಉಚಿತವಾಗಿ ಮಾಡಿದ್ದಾರೆ.ಈ ವರ್ಷವೂ ಸಹ ಜಾಗೃತಿ ಕಾರ್ಯಕ್ರಮಕ್ಕೆ ಸಹ ಕೆಲವು ನಿರ್ಬಂಧನೆಯೊಂದಿಗೆ ಒಪ್ಪಿಗೆ ಸೂಚಿಸಲಾಗಿತ್ತು.ಈ ವರ್ಷ ಎಲೆಕ್ಷನ್ ಇಯರ್ ಆಗಿದ್ದು, ಆ ಬಗ್ಗೆ ಜಾಗೃತಿ ಮೂಡಿಸೋ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಬಗ್ಗೆ ಸಹ ಜಾಗೃತಿ ಮೂಡಿಸುವ ಹೊಣೆ ಚಿಲುಮೆಗೆ ನೀಡಲಾಗಿತ್ತು.ಜೊತೆಗೆ ವಿಹೆಚ್ ಎ ಆ್ಯಪ್ ಡೌನ್ ಲೋಡ್ ಬಗ್ಗೆ ಜಾಗೃತಿ ಮೂಡಿಸಬೇಕಿತ್ತು.ಇದನ್ನು ನಮ್ಮ‌ಬಿಬಿಎಂಪಿ ಅಧಿಕಾರಿಗಳ ಮೇಲ್ ಉಸ್ತುವಾರಿಯಲ್ಲಿ ಮಾಡುವ ಜವಾಬ್ದಾರಿ ನೀಡಲಾಗಿತ್ತು.ಆದ್ರೆ ಚಿಲುಮೆ ಸಂಸ್ಥೆ ಮೇಲೆ ಒಂದು ಕಂಪ್ಲೇಟ್ ಬಂದಿದ್ದು ಅದನ್ನು ತನಿಖೆ ಮಾಡಲಾಗಿದ್ದು,ಚಿಲುಮೆ ಅವರು ಬಿಎಲ್ ಓ, ಅನ್ನೋದಾಗಿ ನಮೋದಿಸಿರುವ ಐಡಿ ಕಾರ್ಡ್ ದುರುಪಯೋಗ ಮಾಡಿರೋದು ತಿಳಿದು ಬಂದಿದೆ.ಹಾಗಾಗಿ ನಾನು ನವೆಂಬರ್ ಎರಡರದ್ದು ಅವರಿಗೆ ನೀಡಲಾಗಿದ್ದ ಅನುಮೋದನೆಯನ್ನು ಕ್ಯಾನ್ಸಲ್ ಮಾಡಿದ್ದೆವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
 
ಅಲ್ಲದೇ ಬಿಬಿಎಂಪಿ ಸಿಇಓ ಆಫೀಸ್ ಗೆ ಈ ದುರುಪಯೋಗದ ಬಗ್ಗೆ ತಿಳಿಸಿದ್ದೇವೆ.ಯಾರ್ಯಾರು ಬಿಎಲ್ ಓ, ಬಿಎಲ್ ಸಿ ಎಂದು ನಕಲಿ ಐಡಿ ಕಾರ್ಡ್ ಮಾಡಿದವರ ವಿರುದ್ದ ಪೊಲೀಸ್ ಕಂಪ್ಲೇಟ್ ನೀಡಲಾಗಿದೆ.ಚಿಲುಮೆ ಸಂಸ್ಥೆ ಮೇಲೆ ಸಹ ದೂರು ದಾಖಲಾಗಿವೆ.ಚಿಲುಮೆ ಸಂಸ್ಥೆ ಮತದಾರರ ಖಾಸಗಿ ಡೇಟಾ ಕಲೆಕ್ಟ್ ಮಾಡಿರುವ ಬಗ್ಗೆ ಸಹ ಮಾಧ್ಯಮಗಳಲ್ಲಿ ಬಿತ್ತರವಾಗ್ತಿದೆ.ಈ ಬಗ್ಗೆ ಸಹ ತನಿಖೆ ನಡೆಯುತ್ತಿದೆ ಚಿಲುಮೆ ಸಂಸ್ಥೆ ಏನಾದ್ರು ವ್ಯಕ್ತಿಗಳ ಖಾಸಗಿ ಮಾಹಿತಿ ಕಲೆಕ್ಟ್ ಮಾಡಿದ್ರೆ ಅದು ಅಪರಾದ.ಈಗಾಗಲೇ ರಾಜ್ಯ ಚುನಾವಣಾ ಆಯೋಗ ಸಹ ಪ್ರಾದೇಶಿಕ ಆಯುಕ್ತರಿಗೆ ವರದಿ ನೀಡುವಂತೆ ಸೂಚನೆ ನೀಡಿದೆ.ನಾವು ಸಹ ಆಂತರಿಕವಾಗಿ ಎಲ್ಲ ಅಧಿಕಾರಿಗಳಲ್ಲಿ ಮಾಹಿತಿ ಸಂಗ್ರಹ ಮಾಡುತ್ತಿದ್ದೇವೆ.ಚಿಲುಮೆ ಸಂಸ್ಥೆಯ ಮೇಲೆ ಹಿಂದಿನಿಂದ ಯಾವುದೆ ಆರೋಪಗಳಿಲ್ಲ ಹಾಗಾಗಿ ನಾವು ಅವರಿಗೆ ಜಾಗೃತಿ ಕಾರ್ಯಕ್ರಮಕ್ಕೆ ಒಪ್ಪಿಗೆ ನೀಡಿದ್ವಿ.ಈಗ ಐಡಿ ಕಾರ್ಡ್ ತಕೊಂಡಿರೋರಿಗೆ ಹಾಗೂ ಇಶ್ಯೂ ಮಾಡಿದವರ ಮೇಲು ಪೊಲೀಸ್ ತನಿಖೆ ನಡೆಯುತ್ತಿದೆ.
 
ತಪ್ಪು ಅಧಿಕಾರಿಗಳಿಂದ ಆಗಿದ್ರೆ ಅವರ ಮೇಲೆ ಕ್ರಮ ಖಂಡಿತ ತೆಗೆದುಕೊಳ್ತೀವಿ.6 ಲಕ್ಷಾ ಮತದಾರರ ಹೆಸರು ಮತದಾರರ ಪಟ್ಟಿಯಿಂದ ಡಿಲೀಟ್ ವಿಚಾರವಾಗಿಯೂ ಪ್ರತಿಕ್ರಿಯಿಸಿದ್ದಾರೆ.ಚಿಲುಮೆ ಸಂಸ್ಥೆಯ ವಿಚಾರಕ್ಕೂ ಮತದಾರರ ಹೆಸರು ಡಿಲೀಟ್ ಗೂ ಸಂಬಂಧವಿಲ್ಲ.ಚಿಲುಮೆ ಸಂಸ್ಥೆಗೆ ನಾವು ಜಾಗೃತಿ ಕಾರ್ಯಕ್ರಮಕ್ಕೆ ಅನುಮೋದನೆ ನೀಡುವ ಮೊದಲೆ ಡಿಲೀಟ್ ಮಾಡಲಾಗಿದೆ.ಮೇಲ್ನೋಟಕ್ಕೆ ಅದಕ್ಕೂ ಇದಕ್ಕು ಸಂಬಂಧ ಇಲ್ಲ.ಹಾಗೇನಾದ್ರು ಸಂಬಂಧ ಇದ್ರೆ ಆ ಬಗ್ಗೆ ಸಹ ತನಿಖೆ ನಡೆಸುತ್ತೆವೆ.ಚಿಲುಮೆ ಸಂಸ್ಥೆಗೆ ಈ ಅಧಿಕಾರ ನೀಡಲು ಯಾರಾದೇ ಒತ್ತಡ ಇರಲಿಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಆನೆ ದಂತದಿಂದ‌ ಮಾಡಿದ ವಸ್ತುಗಳ ವಶ..!