Select Your Language

Notifications

webdunia
webdunia
webdunia
webdunia

ಆನೆ ದಂತದಿಂದ‌ ಮಾಡಿದ ವಸ್ತುಗಳ ವಶ..!

ಆನೆ ದಂತದಿಂದ‌ ಮಾಡಿದ ವಸ್ತುಗಳ ವಶ..!
bangalore , ಶುಕ್ರವಾರ, 18 ನವೆಂಬರ್ 2022 (19:00 IST)
ಆನೆದಂತ ಮಾಡಿರುವ ಸುಮಾರು 21 ಬಗೆಯ ವಸ್ತುಗಳನ್ನ ಸೀಜ್ ಮಾಡಲಾಗಿದೆ. ಚೌಕಾಕಾರದ ಬಾಕ್ಸ್  ಹಿಡಿಕೆಯಿರುವ ಚಾಕು, ಬಾಗಿಲ ಹಿಡಿಕೆ, ಆನೆಯ ಮೂರ್ತಿ  ವಾಕಿಂಗ್ ಸ್ಟೀಕ್, ಮೊಟ್ಟೆ ಆಕಾರದ 20 ಏರಾಟಿಕ್ ವರ್ಕ್ಸ್ (ಕಾಮಸೂತ್ರ ವಾತ್ಸಾಯನ) ಸೇರಿದಂತೆ ಆನೆ ದಂತದಿಂದ ಮಾಡಿರುವ ಒಟ್ಟು ಏಳೂವರೆ ಕೆ.ಜಿ.ತೂಕದ ವಸ್ತುಗಳನ್ನ ಸಿಸಿಬಿ ‌ಮಹಿಳಾ‌ ಘಟಕ ಪೋಲೀಸರು ವಶಪಡಿಸಿ ಕೊಂಡಿದ್ದಾರೆ. .ಹರಿಯಾಣ ಹಾಗೂ ಪಂಜಾಬ್ ಮೂಲದ ಹಿಮ್ಮತ್ ಸಿಂಗ್, ಪ್ರವೀಣ್ ಸಾಂಬಿಯಾಲ್ , ಸ್ಥಳೀಯ ಆರೋಪಿಗಳಾದ ಅಬ್ದುಲ್ ಕಯೂಮ್, ಮೊಹಮ್ಮದ್ ರಫೀಕ್,‌ ಮೊಹಮ್ಮದ್ ಇಸ್ರಾರ್ ಹಾಗೂ ಆಮ್ಜದ್ ಪಾಷಾ ಬಂಧಿತ ಆರೋಪಿಗಳು. ಆರೋಪಿಗಳ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ವನ್ಯಜೀವಿ ಅಪರಾಧ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಸಿಸಿಬಿ ಪೊಲೀಸರು ಹೆಚ್ಚಿನ ತನಿಖೆ ಚುರುಕುಗೊಳಿಸಿದ್ದಾರೆ.

ಹಲಸೂರು ಗೇಟ್ ಬಳಿಯ ಬನ್ನಪ್ಪ ಪಾರ್ಕ್ ಬಳಿ ಪುರಾತನ ಕಾಲದ ವಸ್ತುಗಳನ್ನ  ಆನೆದಂತಗಳಿಂದ ಮಾರಾಟಕಕ್ಕೆ ಯತ್ನಿಸುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿದ ಎಸಿಪಿ ರೀನಾ ಸುವರ್ಣ ನೇತೃತ್ವದ ಆರೋಪಿ ಗಳನ್ನ‌ ಬಂಧನ ಮಾಡಲಾಗಿದೆ ಇನ್ನೂ ಆರೋಪಿಗಳು ಎಲ್ಲಂದ ತಂದು ಮಾರಾಟ ಮಾಡಲು ಯತ್ನಸಿದ್ರು, ಇದರ ಹಿಂದೆ ಯಾರಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ .ಆರೋಪಿಗಳ ವಿರುದ್ಧ ಈ ಹಿಂದೆ ಕ್ರಿಮಿನಲ್‌ ಕೇಸ್ ದಾಖಲಾಗಿದೆಯಾ ಎಂಬುದರ ಬಗ್ಗೆ ಪತ್ತೆ ಹಚ್ಚಲಾಗುತ್ತಿದೆ.  ವಶಪಡಿಸಿಕೊಂಡಿರುವ ವಸ್ತುಗಳು ಮೇಲ್ನೊಟಕ್ಕೆ ಮೊಘಲರ ಕಾಲದ ವಸ್ತುಗಳು ಎಂದು  ನಿಖರವಾಗಿ ಪತ್ತೆ ಹಚ್ಚಲು ಡೆಹ್ರಾಡೂನ್ ನಲ್ಲಿರುವ ವೈಲ್ಡ್ ಲೈಫ್ ಇನ್ ಸ್ಟಿಟ್ಯೂಟ್ ಗೆ ಕಳುಹಿಸಲಾಗುವುದು.‌ ಪತ್ತೆಯಾಗಿರುವ ಆನೆ ದಂತದಿಂದ ಮಾಡಿರುವ ಕೆತ್ತನೆ ವಸ್ತುಗಳು ಎಷ್ಟು ವರ್ಷಗಳದ್ದು ? ಎಂಬುದರ ಬಗ್ಗೆ ವೈಜ್ಞಾನಿಕವಾಗಿ ಪತ್ತೆ ಹಚ್ಚುವಂತೆ ಸ್ಯಾಂಪಲ್ ಗಳನ್ನು ಕಳುಹಿಸಲಾಗುವುದು.ಅಲ್ದೆ ಮರದಲ್ಲಿ ನೈಸರ್ಗಿಕವಾಗಿ ಸಿಗುವ ಅಂಬರ್ ಅಂಟಿನ ತರಹದ ವಸ್ತುವಿನಲ್ಲಿ ಚೇಳೊಂದು ಜೀವಂತ ಸಮಾಧಿಯಾಗಿದೆ.‌ಇದು ಕೂಡ ಬಲು ಅಪರೂಪ ಬೆಲೆಬಾಳುವ ವಸ್ತುವಾಗಿದ್ದು ಇದನ್ನ ಜಪ್ತಿ ಮಾಡಿಕೊಳ್ಳಲಾಗಿದೆ 
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಕ್ರೀಟ್ ರಸ್ತೆಯಲ್ಲಿ ಇಂದ್ರಲೋಕ ಸೃಷ್ಟಿ...!