Select Your Language

Notifications

webdunia
webdunia
webdunia
webdunia

ಮೂರು ವರ್ಷಗಳಿಂದ ಕಳ್ಳತನ ಮಾಡೋದು ಫುಲ್‌ ಟೈಂ ಜಾಬ್

webdunia
bangalore , ಶುಕ್ರವಾರ, 18 ನವೆಂಬರ್ 2022 (18:21 IST)
ಆತ ಬೆಳಗ್ಗೆ ಹೈ ಪೈ ಆಗಿ ಎಸ್ಟೀಮ್ ಕಾರಿನಲ್ಲಿ ಏರಿಯಾ ಪೂರ್ತಿ ರೌಂಡ್ಸ್ ಮಾಡುತ್ತಿದ್ದ. ಬೀಗ ಹಾಕಿರೋ‌ ಮನೆಗಳನ್ನ ಟಾರ್ಗೆಟ್ ಮಾಡುತ್ತಿದ್ದವನು  ನೆಕ್ಸ್ಟ್ ಡೇ ಸ್ಕೇಚ್ ಹಾಕಿ ಕ್ಷಣಮಾತ್ರದಲ್ಲಿ ಮನೆಯಲ್ಲಿದ್ದ ಚಿನ್ನಭಾರಣ , ನಗದು  ಕದ್ದು ಎಸ್ಕೇಪ್ ಆಗುತ್ತಿದ್ದ ಇಂತಹ ಖತರ್ನಾಕ್ ಕಳ್ಳನಿಗೆ ಅತ್ತೆಯೇ ಬ್ರೋಕರ್ . ಕಳ್ಳ ಅಂಡ್ ಟೀಂ ಪೊಲೀಸರ ಕೈಗೆ ಸಿಕ್ಕಿಬಿದಿದ್ದಾರೆ.
 
ಬಾಡಿಗೆ ಕಾರುಗಳನ್ನ‌‌ ಓಡಿಸುತ್ತಿದ್ದವ ತುಮಕೂರು ಮೂಲದ ರಘು  ಮೈ ತುಂಬಾ ಸಾಲ ಮಾಡಿಕೊಂಡು, ದುಶ್ಚಟಗಳಿಗೆ  ದಾಸನಾಗಿದ್ದವನಿಗೆ ಸೆಲ್ಸ್ ಎಕ್ಸಿಕ್ಯೂಟಿವ್ ‌ಆಗಿದ್ದ ವೆಂಕಟೇಶ್ ಪರಿಚಯವಾಗಿದ್ದ ಹಗಲಿನಲ್ಲಿ ಇಡೀ ಏರಿಯಾ ಸರ್ವೇ ಮಾಡಿದ್ರೆ ಇನ್ನೋಬ್ಬ ತನ್‌ ಟೀಂ ಜತೆ ರೌಂಡ್ಸ್ ಮಾಡ್ತಿದ್ದ.ಬೀಗ ಹಾಕಿದ್ದ ಮನೆಗಳನ್ನ ಟಾರ್ಗೆಟ್ ಮಾಡಿ.ಹೈಡ್ರಾಲಿಕ್ ‌ಸ್ಟೀಲ್ ಕಟ್ಟರ್ ಗಳಿಂದ ಬಾಗಿಲು ಮುರಿದು ಮನೆಯಲ್ಲಿದ್ದ ಚಿನ್ನಾಭರಣ ದೋಚಿ‌ ಎಸ್ಕೇಪ್‌ ಆಗುತ್ತಿದ್ದರು‌ಹೀಗೆ ಕದ್ದ ಮಾಲ್ ಗೆ ಅವನ ಅತ್ತೆಯೇ ಮಾರಾಟ ಮಾಡಿಸುತ್ತಿದ್ದಳು ಸುಮಾರು 10 ಮನೆಗಳಿಗೆ ಕನ್ನ‌ಹಾಕಿದ್ದ ಖದೀಮರಾದ ಅರ್ಜುನ್,  ಗಣೇಶ್ ನನ್ನ ಕೂಡ ಬಂದಿಸಿರೋ ಸೋಲದೇವನಹಳ್ಳಿ ಪೊಲೀಸರು 61 ಲಕ್ಷ ಮೌಲ್ಯದ ಚಿನ್ನಾಭರಣ, 250 ಗ್ರಾಂ ಬೆಳ್ಳಿ ಹಾಗೂ ನಗದನ್ನ ವಶಪಡಿಸಿಕೊಂಡಿದ್ದಾರೆ..
ಇತ್ತ ರಾಜಗೋಪಾಲ ನಗರದಲ್ಲಿ ನಕಲಿ‌ ಕೀ ಬಳಸಿ ಮನೆ ಕಳವು ಮಾಡುತ್ತಿದ್ದ ಮನಗಳ್ಳನನ್ನ ಅರೆಸ್ಟ್ ಮಾಡಿದ್ದಾರೆ ಈ‌ಹಿಂದೆ ಹಲವು ಬಾರೀ ಕಳ್ಳತನ ಮಾಡಿ ಜೈಲು ಸೇರಿದ್ದ.ಅಸಾಮಿ ಹೊರಗಡೆ ಬಂದು ಮತ್ತೆ ಇದೇ ಚಾಳಿಯನ್ನ ಮುಂದುವರಿಸಿದ್ದ. ಬಂದಿತ ಆರೋಪಿಯಿಂದ 14.ಲಕ್ಷ ‌ಮೌಲ್ಯದ. ಚಿನ್ನಾ ಹಾಗೂ 300ಗ್ರಾಂ ಬೆಳ್ಳಿ ಯನ್ನ ವಶಪಡಿಸಿಕೊಳ್ಳಲಾಗಿದೆ.ಇನ್ನೂ ಆರೋಪಿಯ ವಿರುದ್ಧ  ಠಾಣೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿವೆ.ಕೃತ್ಯ ಕ್ಕೆ ಬಳಸಿದ್ದ ಒಂದು ಬೈಕ್.‌ಕಬ್ಬಿಣದ ರಾಡನ್ನು ಕೂಡ ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.ಇಷ್ಟುದಿನ ಕಳ್ಳತನ ಮಾಡಿ ಜೀವನ ಮಾಡುತ್ತಿದ್ದ ಅಸಾಮಿಗಳನ್ನ ಕಾರ್ಯಾಚರಣೆ ಮಾಡಿದ ಉತ್ತರ ವಿಭಾಗದ ಪೋಲೀಸರು ಖತರ್ನಾಕ್ ಕಳ್ಳರನ್ನ ಜೈಲಿಗೆ ಅಟ್ಟಿದ್ದಾರೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಜವಾಹರ್‌ಲಾಲ್ ನೆಹರು ತಾರಾಲಯದಲ್ಲಿ ಮೂರುದಿನಗಳ ವರೆಗೂ ವಿಜ್ಞಾನ ಪ್ರದರ್ಶನ