ಬೆಂಗಳೂರಿನಂತಹ ಕಾಂಕ್ರಿಟ್ ಸಿಟಿಯಲ್ಲಿ ಇಂದ್ರಲೋಕವನ್ನೆ ಸೃಷ್ಟಿಸಿದೆ ಈ ಪಿಂಕ್ ಟಬುಬಿಯಾ ಹೂ . ಅದರಲ್ಲಂತೂ ಕಬ್ಬನ್ ಪಾರ್ಕ್ ನಲ್ಲಿ ಈ ಪಿಂಕ್ ಹೂಗಳು ದಾರಿ ಹೋಕರನ್ನು ಕೈಬೀಸಿ ಕರಿತಾ ಇದೆ. ಹೌದು ಈ ದೃಷ್ಯ ಕಂಡು ಬಂದಿದ್ದು ಬೆಂಗಳೂರಿನ ಕಬ್ಬನ್ ಪಾರ್ಕ್ ನಲ್ಲಿ , ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ತನ್ನ ಕಂಪನ್ನು ಬೀರುವ ಈ ಹೂ, ಬಿಗೋನಿಯೇಸಿ ಕುಟುಂಬದಲ್ಲಿ ಒಂದು ಬಗೆ . ಇದ್ರಲ್ಲಿ ಟಬುಬಿಯಾ ರೋಸಿಯಾ, ಟಬುಬಿಯಾ ಬ್ಲೂ ಎಂಬ ಹಲವು ಬಗೆಯ 90 ಕ್ಕೂ ಹೆಚ್ಚು ತಳಿಗಳಿವೆ. ಈ ಸುಮ ಮೊದಲು ಹೆಚ್ಚಾಗಿ ಕಂಡು ಬಂದಿದ್ದು ಕ್ಯೂಬಾದಲ್ಲಿ. ಮೆಕ್ಸಿಕೊ, ಕೆರಿಬಿಯನ್, ಅರ್ಜೆಂಟೀನಾ, ಅಮೆರಿಕ ಸೇರಿದಂತೆ ಉಷ್ಣವಲಯ ಪ್ರದೇಶಗಳಲ್ಲಿ ಆದರೆ ಈಗ ಈ ಹೂ ಗಳು ಇಡೀ ಕಬ್ಬನ್ ಪಾರ್ಕ್ನ್ನು ಆವರಿಸಿದೆ. ಇನ್ನು ಇಲ್ಲಿಗೆ ಬರುವ ಪ್ರವಾಸಿಗರೂ ಕೂಡ ಸಂತಸ ವ್ಯಕ್ತಪಡಿಸಿತ್ತಿದ್ದಾರೆ.