Publish Date: Mon, 27 Mar 2023 (16:21 IST)
Updated Date: Mon, 27 Mar 2023 (16:24 IST)
ಚುನಾವಣೆಯ ಸಮೀಪದಲ್ಲಿ ಅನ್ಯ ಪಕ್ಷಗಳ ನಾಯಕರಿಗೆ ಗಾಳ ಹಾಕುತ್ತಿರುವ ಕಾಂಗ್ರೆಸ್ ಇಂದು ಮೂವರು ನಾಯಕರನ್ನ ಕಾಂಗ್ರೆಸ್ ಸೇರ್ಪಡೆ ಮಾಡಿಕೊಂಡಿದೆ.ನಗರದ ಕೆಪಿಸಿಸಿ ಕಚೇರಿಯಲ್ಲಿ ನಡೆದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿವಕುಮಾರ್, ಸಿ ಎಲ್ ಪಿ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷದ ಭಾವುಟ ಕೊಡುವ ಮೂಲಕ ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಂಡರು.ಶಿಗ್ಗಾವಿಯ ಮಾಜಿ ಸಂಸದ ಮಂಜುನಾಥ್ ಕುನ್ನೂರು,ಕೆ.ಆರ್.ಪೇಟೆಯ ಬಿ.ಎಲ್ ದೇವರಾಜು,ಎಂ.ಸಿ.ಸುಧಾಕರ್ ಇಂದು ಕೈ ಪಡೆ ಸೇರಿಕೊಂಡರು. ಈ ಬಗ್ಗೆ ಡಿಕೆಶಿವಕುಮಾರ್ ಮಾತನಾಡಿ ಶಿಗ್ಗಾವಿಯಲ್ಲಿ ನಮಗೆ ಬಲ ಬಂದಿದೆ.ಮುಖ್ಯಮಂತ್ರಿಗಳ ಕ್ಷೇತ್ರದ ನಾಯಕರೇ ಸೇರ್ತಿದ್ದಾರೆ.ಇವರನ್ನ ಸಿಎಂ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ.ಇದು ಇವತ್ತಿನ ಸೇರ್ಪಡೆಯೇ ಸಾಕ್ಷಿ.
ಇಂದು ಕಾಂಗ್ರೆಸ್ ಗೆ ಐತಿಹಾಸಿಕ ದಿನ ಅನೇಕ ಪಕ್ಷಗಳಿಂದ ನಾಯಕರು ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ.ಈ ಮೂಲಕ ಕಾಂಗ್ರೆಸ್ ಹೇಗೆ ರಾಜ್ಯದಲ್ಲಿ ಮುನ್ನುಗ್ಗುತ್ತಿದೆ ಎಂದು ಗೊತ್ತಾಗುತ್ತದೆ ಎಂದು ಹೇಳಿದರು.