Webdunia - Bharat's app for daily news and videos

Install App

ಬಸವೇಶ್ವರ ದೇವಸ್ಥಾನದಲ್ಲಿ ಅದ್ದೂರಿ ಕಡಲೇಕಾಯಿ ಪರಿಷೆ

Webdunia
ಶನಿವಾರ, 14 ಜನವರಿ 2023 (19:18 IST)
ನಾಡಿನೆಲ್ಲೆಡೆ ಇಂದಿನಿಂದ ಸಂಕ್ರಾಂತಿ ಹಬ್ಬದ ಸಡಗರ ಮನೆಮಾಡಿದೆ.ದೇವರ ಉತ್ಸವ, ಮನೆಮನೆಗಳಲ್ಲಿ ವಿಶೇಷ ಪೂಜೆ, ನೆರವೇರಿಸಿ ಸಂಭ್ರಮ,ಸಡಗರದಿಂದ ಹಬ್ಬ ಆಚರಿಸುತ್ತಾರೆ. ಅದೇ ರೀತಿ ನಗರದ ಹೊರ ಹೊಲಯದ ಸೋಂಪುರ ಬಳಿಯ ಬಸವೇಶ್ವರ ದೇವಸ್ಥಾನದಲ್ಲಿ ಅದ್ದೂರಿ ಕಡಲೇಕಾಯಿ ಪರಿಷೆ ಹಾಗೂ ಬಸವೇಶ್ವರ ರಥೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ.
ಕೆಂಗೇರಿ ಸಮೀಪದ ನೈಸ್ ಕಾರಿಡಾರ್ ಸರ್ಕಲ್ ಬಳಿ ಚನ್ನವೀರಯ್ಯನಪಾಳ್ಯದ ಚೋಳರ ಕಾಲದ ಇತಿಹಾಸ ಪ್ರಸಿದ್ಧ ನಂದಿಬಸವೇಶ್ವರ ದೇವಸ್ಥಾನದ ಅವರಣದಲ್ಲಿ ಸಂಕ್ರಾಂತಿ ಹಬ್ಬದಂದು ಕಡಲೇಕಾಯಿ ಪರಿಷೆ ನಡೆಯುತ್ತಿದೆ. ಕೆ.ಆರ್.ಐ,ಡಿ,ಎಲ್ ಅಧ್ಯಕ್ಷರಾದ ಎಂ ರುದ್ರೇಶ್ ನೇತೃತ್ವದಲ್ಲಿ ಈ ಬಾರಿ ಕುಸ್ತಿ ಪಂದ್ಯಾವಳಿ ಕಾರ್ಯಕ್ರಮ ಆಯೋಜನೆರ ಮಾಡಿದ್ದು ನಟ ದುನಿತಯಾ ವಿಜಿ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದಾರೆ.

ಇಂದು ನಡೆದ ರಾಜ್ಯ ಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಗೆ ಚಾಲನೆ ಕೊಟ್ಟ ನಟ ದುನಿಯಾ ವಿಜಿ ಕುಸ್ತಿ ಪಟುಗಳ ಜೊತೆ ಮಾತನಾಡಿ ಹಾರೈಸಿದ್ದಾರೆ. ರಾಜ್ಯದ ನಾನಾ ಭಾಗಗಳಿಂದ ಕುಸ್ತಿ ಪಟುಗಳು ಆಗಮಿಸದ್ದು ಕುಸ್ತಿ ಪಟುಗಳ ಆಟ ನೋಡಿ ನೆರೆದಿದ್ದ ಜನರು ಸಂತಸಗೊಂಡ್ರು.ಪರಿಷೆಯ ಅಂಗವಾಗಿ ಬರುವ ಭಕ್ತಾದಿಗಳಿಗೆ ಉಚಿತವಾಗಿ ತಿನ್ನಲು ಬೇಯಿಸಿದ ಕಡಲೇಕಾಯಿ, ಕಬ್ಬು, ಗೆಣಸು, ಗಿಣ್ಣು, ಅವರೆಕಾಯಿ ವಿತರಿಸಲಾಗುವುದು. ಜೊತೆಗೆ 80 ಸಾವಿರ ಭಕ್ತಾದಿಗಳಿಗೆ ಅನ್ನದಾಸೋಹ ನಡೆಯುತ್ತಿದೆ. ವಿಶೇಷ ಕಳೆ ನೀಡಲು ಜನಪದ ಕಲಾ ಪ್ರದರ್ಶನ, ಪಟ್ಟದ ಕುಣಿತ, ಪೂಜಾ ಕುಣಿತ, ಕರಡಿ ಕುಣಿತ, ವೀರಭದ್ರನ ಕುಣಿತ, ವೀರಗಾಸೆ, ಕಂಸಾಳೆ, ಗೊರವನ ಕುಣಿತ,ಮುಂತಾದ ಕಾರ್ಯಕಕ್ರಮಗಳು ಜೊತೆ ಶ್ರೀ ಬಸವೇಶ್ವರ ರಥೋತ್ಸವ ಜರುಗಲಿದೆ ಎಂದು ಕೆ.ಆರ್.ಐ,ಡಿ,ಎಲ್ ಅಧ್ಯಕ್ಷರಾದ ಎಂ ರುದ್ರೇಶ್ ತಿಳಿಸಿದ್ರು.ಪರಿಷೆ ಅಂಗವಾಗಿ ಸೋಂಪುರ, ಚೆನ್ನವೀರಯ್ಯನಪಾಳ್ಯ, ವರಾಹಸಂದ್ರ, ಗಟ್ಟಿಗೆರೆಪಾಳ್ಯ, ದೊಡ್ಡಬೆಲೆ, ಎಚ್.ಗೊಲ್ಲಹಳ್ಳಿ, ಹೆಮ್ಮಿಗೆಪುರ ಗ್ರಾಮಗಳ ಜನರು ಸೇರಿ ಈ ಬಾರಿ ಮಕರ ಸಂಕ್ರಾಂತಿಯನ್ನು ಸಡಗರ ಸಂಭಮದಿಂದ ಆಚರಿಸಲಿದ್ದಾರೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments