ಬೆಂಗಳೂರು: ನನಗೆ ಅಪಘಾತ ಆಗಿ ಆಸ್ಪತ್ರೆಯಲ್ಲಿದ್ದಿದ್ದರಿಂದ ಗೃಹಲಕ್ಷ್ಮಿ ಹಣ ಹಾಕೋದು ಸ್ವಲ್ಪ ಲೇಟ್ ಆಯ್ತು. ಒಂದು ವಾರದಲ್ಲಿ ಎಲ್ಲಾ ಕ್ಲಿಯರ್ ಮಾಡ್ತೀವಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.
ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮೀ ಯೋಜನೆ ಬಾಕಿಯಿದೆ. ಅಪಘಾತದಿಂದ ಚೇತರಿಸಿಕೊಂಡ ಬಳಿಕ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಇದೇ ಮೊದಲ ಬಾರಿಗೆ ತಮ್ಮ ಕೆಲಸಗಳಿಗೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ.
ಗೃಹಲಕ್ಷ್ಮಿ ವಿಳಂಬವಾಗುತ್ತಿರುವುದಕ್ಕೆ ಪ್ರತಿಪಕ್ಷಗಳು ತೀವ್ರ ಟೀಕೆ ಮಾಡುತ್ತಿವೆ. ಸಾರ್ವಜನಿಕರಿಂದಲೂ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ಅವರು ವಿಳಂಬಕ್ಕೆ ತಮ್ಮ ಅಪಘಾತವೇ ಕಾರಣ ಎಂದಿದ್ದಾರೆ.
ನನಗೆ ಅಪಘಾತವಾಗಿ 3 ತಿಂಗಳು ಲೇಟ್ ಆಯ್ತು. ಇಲ್ಲದೇ ಹೋಗಿದ್ದರೆ ನಾನು ಹಣಕಾಸು ಇಲಾಖೆಗೆ ಪದೇ ಪದೇ ಒತ್ತಡ ಹಾಕುತ್ತಿರುತ್ತೇನೆ. ವಿಳಂಬ ಮಾಡಿದರೆ ತೊಂದರೆ ಆಗುತ್ತದೆ ಎಂದು ಹಣಕಾಸು ಇಲಾಖೆಗೆ ನೆನಪಿಸುತ್ತಿದ್ದೆ. ಸಿಎಂ ಗಮನಕ್ಕೂ ತರುತ್ತಿದ್ದೆ. ದುರ್ದೈವ ನನಗೆ ಅಪಘಾತವಾಗಿ 40 ದಿನ ಮನೆಯಲ್ಲಿ ಕೂರುವಂತೆ ಆಯಿತು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದ್ದಾರೆ.