Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಭಿಕ್ಷೆಯಿಂದಲೇ ವಿಜಯೇಂದ್ರ ಶಾಸಕರಾಗಿದ್ದು: ಡಿಕೆ ಶಿವಕುಮಾರ್ ಬಹಿರಂಗ ಹೇಳಿಕೆ

DK Shivakumar

Krishnaveni K

ಬೆಂಗಳೂರು , ಶುಕ್ರವಾರ, 21 ಫೆಬ್ರವರಿ 2025 (12:21 IST)
ಬೆಂಗಳೂರು: ಕಾಂಗ್ರೆಸ್ ಭಿಕ್ಷೆಯಿಂದಲೇ ವಿಜಯೇಂದ್ರ ಶಾಸಕನಾಗಿದ್ದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಬಹಿರಂಗ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿದ್ದು ಈಗ ಭಾರೀ ಚರ್ಚೆಗೆ ಕಾರಣವಾಗಿದೆ.

ಕಾರ್ಯಕ್ರಮವೊಂದರಲ್ಲಿ ಡಿಕೆಶಿ ಈ ಹೇಳಿಕೆ ನೀಡಿದ್ದರು. ಇದರ ಬಗ್ಗೆ ಈಗ ಬಿಜೆಪಿ ಬೆಂಗಲಿಗರೇ ಚರ್ಚೆ ನಡೆಸುತ್ತಿದ್ದಾರೆ. ಒಂದೆಡೆ ರಾಜ್ಯ ಬಿಜೆಪಿಯಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಣ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೊಂದಾಣಿಕೆ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪಿಸುತ್ತಿದೆ. ಇದರ ನಡುವೆ ಡಿಕೆಶಿ ಇಂತಹದ್ದೊಂದು ಹೇಳಿಕೆ ನೀಡಿರುವುದು ಮಹತ್ವ ಪಡೆದುಕೊಂಡಿದೆ.

‘ವಿಜಯೇಂದ್ರ ಅಲ್ಲ ಈಗ ವಿಜಯೇಂದ್ರ ಅಣ್ಣ ಎಂದು ಎಲ್ಲರೂ ಕರೀತಾರೆ. ಅವರು ಶಾಸಕರಾಗಿ ಬಂದಿದ್ದೇ ಕಾಂಗ್ರೆಸ್ ಭಿಕ್ಷೆಯಿಂದ. ಆವತ್ತು ಒಂದು ವೇಳೆ ಕಾಂಗ್ರೆಸ್ ಅವರ ಎದುರು ನಾಗರಾಜ್ ಎಂಬ ಪ್ರಬಲ ಅಭ್ಯರ್ಥಿಯನ್ನು ಹಾಕಿದ್ದರೆ ವಿಜಯೇಂದ್ರ ಶಾಸಕರಾಗಿಯೇ ಇರುತ್ತಿರಲಿಲ್ಲ’ ಎಂದು ಡಿಕೆಶಿ ವ್ಯಂಗ್ಯವಾಗಿ ಹೇಳಿದ್ದಾರೆ.

ಆದರೆ ಅವರ ಈ ಹೇಳಿಕೆ ಈಗ ಚರ್ಚೆಗೆ ಕಾರಣವಾಗಿದೆ. ಹಾಗಿದ್ದರೆ ಇಷ್ಟು ದಿನ ಯತ್ನಾಳ್ ಬಣ ವಿಜಯೇಂದ್ರ ಡಿಕೆಶಿ ಮತ್ತು ಕಾಂಗ್ರೆಸ್ ನಾಯಕರ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎನ್ನುವುದು ನಿಜವಾ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಚಿತ ಪ್ರಯಾಣ ಇಫೆಕ್ಟ್: ಪುರುಷರಿಗೆ ಆಸನ ಬಿಟ್ಟುಕೊಡಲು ಕೆಎಸ್ ಆರ್ ಟಿಸಿ ಆದೇಶ