Select Your Language

Notifications

webdunia
webdunia
webdunia
webdunia

ಭಾರೀ ಮಳೆಗೆ ಕುಂದಾನಗರಿ ತತ್ತರ: ಜನಜೀವನ ಹರೋಹರಾ

ಭಾರೀ ಮಳೆಗೆ ಕುಂದಾನಗರಿ ತತ್ತರ: ಜನಜೀವನ ಹರೋಹರಾ
ಬೆಳಗಾವಿ , ಭಾನುವಾರ, 30 ಜೂನ್ 2019 (18:44 IST)
ಕುಂದಾನಗರಿ ಖ್ಯಾತಿಯ ಜಿಲ್ಲಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಜನಜೀವನ ಪರಿಸ್ಥಿತಿ ಹೆಚ್ಚು ಏರುಪೇರಾಗಿದೆ.

ಜನರು ಸಂಕಷ್ಟದಲ್ಲಿದ್ದರೆ, ಸಂಚಾರ ವ್ಯವಸ್ಥೆಯೂ ಹದಗೆಟ್ಟು ಹೋಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾನದಿಯಲ್ಲಿ ನದಿ ನೀರಿನ ಒಳಹರಿವು ಹೆಚ್ಚಳಗೊಂಡಿದೆ. ಇದರ ಪರಿಣಾಮ ನದಿ ಪಾತ್ರಗಳ ಜನರು ಸಂಕಷ್ಟ ಎದುರಿಸುವಂತಾಗಿದೆ.

ಮಹಾರಾಷ್ಟ್ರದ ಶಿರೋಳ ತಾಲೂಕಿನಲ್ಲಿರುವ ರಾಜಾಪುರ ಬ್ಯಾರೇಜ್ ನಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಬ್ಯಾರೇಜ್ ದುರಸ್ತಿ ಹಿನ್ನಲೆಯಲ್ಲಿ ನೀರನ್ನು ತಡೆಯಲು ಹಾಕಲಾಗಿದ್ದ ಮಣ್ಣಿನ ತಡೆಗೋಡೆಯೂ ಕುಸಿದಿದೆ. ಹೀಗಾಗಿ ಕೃಷ್ಣಾ ನದಿ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ.

3675 ಕ್ಯುಸೆಕ್್ ನಿಂದ ನೀರಿನ ಮಟ್ಟವು 19,000 ಕ್ಯುಸೆಕ್ ಗೆ ಏರಿಕೆ ಕಂಡಿದೆ. ಕೃಷ್ಣಾನದಿಗೆ 1,50,000 ಕ್ಯುಸೆಕ್ ನೀರು ಹರಿದು ಬಂದರೆ ಪ್ರವಾಹದ ಭೀತಿ ಕಾಡುವುದು ನಿಶ್ಚಿತವಾಗಿದೆ.

ಬೆಳಗಾವಿ ನಗರದ ತಗ್ಗು ಪ್ರದೇಶದಲ್ಲಿರುವ ನಗರಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ನೀರು ನುಗ್ಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಖರ್ಗೆ ನೀಡಿದ್ರು ಬೈಕ್ ನಿಂದ ಬಿದ್ದವನಿಗೆ ಚಿಕಿತ್ಸೆ