Publish Date: Tue, 31 Jul 2018 (14:05 IST)
Updated Date: Tue, 31 Jul 2018 (14:09 IST)
ಹೆಚ್. ಡಿ. ಕುಮಾರಸ್ವಾಮಿಗೆ ಸಿಎಂ ಆಗೋದು ಹೇಗೆಂದು ಚೆನ್ನಾಗಿ ಗೊತ್ತು. 40 ಸೀಟಿದ್ದಾಗ ಹೇಗೆ?38 ಇದ್ದಾಗ ಹೇಗೆ ಎಂದು ಚೆನ್ನಾಗಿ ಮ್ಯಾನೇಜ್ ಮಾಡಿದ್ರು ಎಂದು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಹೇಳಿಕೆ ನೀಡಿದ್ದಾರೆ.
ಹಾಸನದಲ್ಲಿ ಮಾಜಿ ಸಚಿವ ಹಾಗೂ ಶಾಸಕ ವಿ.ಸೋಮಣ್ಣ ಈ ಹೇಳಿಕೆ ನೀಡಿದ್ದಾರೆ. ಕರ್ನಾಟಕ ಏಕೀಕರಣ ಆಗಿ ಬಹಳ ವರ್ಷಗಳಾಯ್ತು. ಕರ್ನಾಟಕ ಬೇರ್ಪಡಿಸೊ ಕೂಗಿಗೆ ನಮ್ಮ ಸಹಮತ ಇಲ್ಲ, ಅದರ ಅಗತ್ಯವು ಇಲ್ಲ. ಶ್ರೀ ರಾಮುಲು ಮತ್ತು ಇತರರ ಹೇಳಿಕೆಗೆ ಮಹತ್ವವಿಲ್ಲ. ಮುಖ್ಯಮಂತ್ರಿಗಳು ಏಕೆ ಇದನ್ನು ದೊಡ್ಡದು ಮಾಡುತ್ತಿದ್ದಾರೋ ಗೊತ್ತಿಲ್ಲ.
ಅವರು ರಾಜ್ಯದ ಎಲ್ಲರಿಗೂ ಮುಖ್ಯಮಂತ್ರಿ, ಅವರು ಉದ್ವೇಗಕ್ಕೆ ಒಳಗಾಗಬಾರದು. ಜವಾಬ್ದಾರಿಯುತ ಸ್ಥಾನದಲ್ಲಿರೋರು ಈ ರೀತಿ ಹೇಳಿಕೆ ನೀಡೋದು ಸರಿಯಲ್ಲ ಎಂದು ಸಿಎಂ ಕುಮಾರಸ್ವಾಮಿಗೆ ಮಾಜಿ ಸಚಿವ ವಿ.ಸೋಮಣ್ಣ ಟಾಂಗ್ ನೀಡಿದ್ದಾರೆ.
ಕುಮಾರಸ್ವಾಮಿ ಸಿಎಂ ಆದ ಬಳಿಕ ಬಹುಶಃ ನಿದ್ದೆ ಮಾಡ್ತಿಲ್ಲ ಎಂದು ಕಾಣುತ್ತದೆ ಎಂದಿರುವ ಅವರು, ಕುಮಾರಸ್ವಾಮಿ ಕನವರಿಕೆಯಲ್ಲಿದ್ದಾರೊ ಏನೊ ಗೊತ್ತಿಲ್ಲ ಎಂದಿದ್ದಾರೆ. ದಯಮಾಡಿ ಅವರು ದಿನಕ್ಕೆ ಐದಾರು ಗಂಟೆ ನಿದ್ದೆ ಮಾಡಲಿ ಎಂದು ಸೋಮಣ್ಣ ಕಾಳೆಲೆದಿದ್ದಾರೆ.