Publish Date: Tue, 31 Jul 2018 (13:18 IST)
Updated Date: Tue, 31 Jul 2018 (13:22 IST)
ಅಂಬ್ಯುಲೆನ್ಸ್ ಗೆ ಜಾಗ ಮಾಟ್ಟು ಮಾನವೀಯತೆ ಮೆರೆದವರು ಆ ಬಳಿಕ ಗಲಾಟೆ ಮಾಡಿಕೊಂಡ ಘಟನೆ ನಡೆದಿದೆ. ಘಟನೆಯಲ್ಲಿ ಬೈಕ್ ಸವಾರನೊಬ್ಬ ಗಾಯಗೊಂಡಿದ್ದಾನೆ.
ನೆಲಮಂಗಲದ ನವಯುಗ ಟೋಲ್ ನಲ್ಲಿ ಗಲಾಟೆ ನಡೆದಿದೆ. ತುಮಕೂರಿನಿಂದ ಬೆಂಗಳೂರು ಕಡೆಗೆ ಸಂಚರಿಸುವ ಮಾರ್ಗದಲ್ಲಿ ಆಂಬುಲೆನ್ಸ್ ಬಂದಿದೆ. ಆಗ ಅಂಬುಲೆನ್ಸ್ ಗೆ ವಾಹನಗಳ ಸವಾರರು ದಾರಿ ಮಾಡಿಕೊಟ್ಟಿದ್ದಾರೆ.
ಆದರೆ ಅಂಬ್ಯುಲೆನ್ಸ್ ಹೋದ ಬಳಿಕ ಬೈಕ್ ಸವಾರನೊಬ್ಬ ಕೆಳಗೆ ಬಿದ್ದಿದ್ದಾನೆ. ಹೀಗಾಗಿ ವಾಹನ ಸವಾರರ ನಡುವೆ ಗಲಾಟೆ ನಡೆದು, ಬೈಕ್ ಸವಾರನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ನೆಲಮಂಗಲ ಟ್ರಾಫಿಕ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕಳೆದ ಎರಡು ದಿನದಿಂದ ಗಲಾಟೆ ಗದ್ದಲದಲ್ಲಿ ನವಯುಗ ಟೋಲ್ ಸುದ್ದಿಯಲ್ಲಿದೆ.